ಬೆಂಗಳೂರು: ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಪೋಸ್ಟ್ ಮಾಡುವ ಇನ್ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ 26 ವರ್ಷದ ಯುವಕನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆದ ನಂತರ ಈತನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್ ಮತ್ತು ಇತರ ಭಾಗಗಳಲ್ಲಿ ಮಹಿಳೆಯರು ನಡೆದುಕೊಂಡು ಹೋಗುವಾಗ ಅವರ ಒಪ್ಪಿಗೆಯಿಲ್ಲದೆ ಅವರ ‘ಸ್ಟ್ರೀಟ್ ಫ್ಯಾಷನ್’ ಅನ್ನು ಸೆರೆಹಿಡಿಯುವುದಾಗಿ ಹೇಳಿಕೊಂಡು ರೀಲ್ಗಳನ್ನು ಪೋಸ್ಟ್ ಮಾಡುತ್ತಿರುವ ಖಾತೆಯ ಬಗ್ಗೆ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಈ ಖಾತೆಯನ್ನು ತೆಗೆದುಹಾಕಲು ಸಹಾಯ ಮಾಡುವಂತೆ ಮಹಿಳೆ ಬೆಂಗಳೂರು ಮತ್ತು ಸೈಬರ್ ಅಪರಾಧ ಕೋಶದ ಪೊಲೀಸರನ್ನು ಒತ್ತಾಯಿಸಿದ ನಂತರ ಬೆಂಗಳೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ ಹಾಗೂ ವ್ಯಕ್ತಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ (bangaluru) ಕೆ.ಆರ್.ಪುರಂ ನಿವಾಸಿ ಗುರುದೀಪ್ ಸಿಂಗ್(26) ಬಂಧಿತ ವ್ಯಕ್ತಿ. ಈತ ನಿರುದ್ಯೋಗಿ ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರ ಎಂದು ಹೇಳಲಾಗಿದೆ. ಬೆಂಗಳೂರಿನ ಕೆ.ಆರ್. ಪುರಂ ಪ್ರದೇಶದಲ್ಲಿರುವ ಈತನ ನಿವಾಸದಲ್ಲಿ ಬಂಧಿಸಲಾಗಿದೆ. ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ತಮ್ಮ ಒಪ್ಪಿಗೆಯಿಲ್ಲದೆ ತಮ್ಮನ್ನು ವೀಡಿಯೊ ಚಿತ್ರೀಕರಿಸಲಾಗಿದೆ. ಈ ಪೋಸ್ಟ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸಿದರೂ ತೆಗೆದುಹಾಕಲಾಗಿಲ್ಲ ಎಂದು ಮಹಿಳೆ ದೂರಿದ್ದರು.
ಚರ್ಚ್ ಸ್ಟ್ರೀಟ್ನಲ್ಲಿ “ತುಂಬಾ ಅನುಚಿತವಾಗಿ” ಚಿತ್ರೀಕರಿಸಲ್ಪಟ್ಟ ತನ್ನ ವೀಡಿಯೊವನ್ನು ತನ್ನ ಒಪ್ಪಿಗೆಯಿಲ್ಲದೆ ಪೋಸ್ಟ್ ಮಾಡಿದ ನಂತರ, ತನಗೆ “ಅಶ್ಲೀಲ ಸಂದೇಶಗಳು” ಬರಲು ಪ್ರಾರಂಭಿಸಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಆ ರೀಲ್ನ ಪರಿಣಾಮ ತನಗೆ ಜನರಿಂದ ಅಶ್ಲೀಲ ಸಂದೇಶಗಳು ಬರುತ್ತಿವೆ. ನಾನು ಖಾತೆಯ ಹಿಂದಿನ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ನಾನು ಅದನ್ನು ಬಹು ಖಾತೆಗಳಿಂದ ವರದಿ ಮಾಡಲು ಪ್ರಯತ್ನಿಸಿದೆ ಆದರೆ ಅದು ಸಮುದಾಯ ಮಾರ್ಗಸೂಚಿಗಳಲ್ಲಿದೆ ಎಂದು ಅದು ಹೇಳುತ್ತದೆ ಮತ್ತು ಈ ಹಂತದಲ್ಲಿ ಇನ್ಸ್ಟಾಗ್ರಾಂ (Instagram)ಗಾಗಿ ಸಮುದಾಯ ಮಾರ್ಗಸೂಚಿಗಳು ಏನೆಂದು ನನಗೆ ತಿಳಿದಿಲ್ಲ. ಜನರು ನನ್ನ ಖಾತೆಯನ್ನು ಹುಡುಕುತ್ತಿದ್ದಾರೆ ಮತ್ತು ನನಗೆ ಅಸಭ್ಯ ಸಂದೇಶಗಳು ಬರುತ್ತಿವೆ ಎಂದು ಮಹಿಳೆ ಹೇಳಿದ್ದಾರೆ.
ಆ ಇನ್ಸ್ಟಾಗ್ರಾಮ್ ಪುಟದಲ್ಲಿ ಹಲವಾರು ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊಗಳಿವೆ. ಹೆಚ್ಚಿನವುಗಳನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲಾ ವೀಡಿಯೊಗಳನ್ನು ಅವರಿಗೆ ಅರಿವಿಲ್ಲದಂತೆ ಸೆರೆಹಿಡಿಯಲಾಗಿದೆ ಎಂದು ಅವರು ದೂರಿದ್ದಾರೆ.
ʼಆ ವ್ಯಕ್ತಿ ಚರ್ಚ್ ಸ್ಟ್ರೀಟ್ನಲ್ಲಿ ‘ ಬೀದಿ ಅವ್ಯವಸ್ಥೆ’ಯನ್ನು ಚಿತ್ರೀಕರಿಸುವಂತೆ ನಟಿಸುತ್ತಾ ಓಡಾಡುತ್ತಾನೆ. ಆದರೆ ವಾಸ್ತವದಲ್ಲಿ ಆತ ಮಹಿಳೆಯರನ್ನು ಹಿಂಬಾಲಿಸಿ ಅವರ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡುತ್ತಿರುತ್ತಾನೆ. ಅದು ನನಗೂ ಆಗಿದೆ. ನನ್ನ ಖಾತೆಯು ಸಾರ್ವಜನಿಕವಾಗಿದೆ ಎಂಬ ಕಾರಣಕ್ಕೆ ನಾನು ಸಾರ್ವಜನಿಕವಾಗಿ ಚಿತ್ರೀಕರಿಸಲು ಒಪ್ಪುತ್ತೇನೆ ಎಂದರ್ಥವಲ್ಲ. ಇನ್ಸ್ಟಾಗ್ರಾಂ (Instagram)ನಲ್ಲಿ ವೀಕ್ಷಣೆಗಳನ್ನು ಹೆಚ್ಚಾಗಿಸುವುದಕ್ಕಾಗಿ ಹೀಗೆ ಮಾಡುವುದು ಸರಿಯಲ್ಲʼ ಎಂದು ಅವರು ಹೇಳಿದ್ದಾರೆ.
ಯುವತಿ ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ, ತನ್ನ ಪೋಸ್ಟ್ನಲ್ಲಿ ಬೆಂಗಳೂರು ಪೊಲೀಸರನ್ನು ನೇರವಾಗಿ ಟ್ಯಾಗ್ ಮಾಡಿ ಖಾತೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾಳೆ. ”
ಆರೋಪಿಯ ಬಂಧನ
ಈ ಖಾತೆಯನ್ನು ತೆಗೆದುಹಾಕಲು ಸಹಾಯ ಮಾಡುವಂತೆ ಯುವತಿ ಬೆಂಗಳೂರು ಮತ್ತು ಸೈಬರ್ ಅಪರಾಧ ಕೋಶದ ಪೊಲೀಸರನ್ನು ಒತ್ತಾಯಿಸಿದ ನಂತರ ಬೆಂಗಳೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ, ಆರೋಪಿ ಕೆಆರ್ ಪುರಂ ನಿವಾಸಿ ಗುರುದೀಪ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ