ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ; ಬುದ್ಧಿವಾದ ಹೇಳಿದ್ದಕ್ಕೆ ಆಕೆಯ ಸಂಬಂಧಿಯ ಕತ್ತು ಕೊಯ್ದ…!

ಬೆಂಗಳೂರು : ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಯುವಕನಿಗೆ ಬುದ್ಧಿ ಹೇಳಿದ ಮಹಿಳೆಯ ಸಂಬಂಧಿಯ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಎಚ್‌ಎಎಲ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆ ಜುಲೈ ೧೭ರಂದು ನಡೆದಿದ್ದು, ಗಾಯಗೊಂಡಿರುವ ಖಾಸಗಿ ಕಂಪನಿಯ ಉದ್ಯೋಗ ಪ್ರಶಾಂತ ಎಂಬವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ತಮಿಳುನಾಡು ತಿರಪ್ಪತ್ತೂರು ಮೂಲದ ಯುವಕ ಸೆಲ್ವ ಕಾರ್ತಿಕ್ ಎಂದು ಗುರುತಿಸಲಾಗಿದೆ. ಈತ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಗೆ ತನ್ನನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯ ಬಗ್ಗೆ ಕಾರ್ತಿಕ್ ಏಕಪಕ್ಷೀಯವಾಗಿ ಪ್ರಣಯ ಭಾವನೆಗಳನ್ನು ಬೆಳೆಸಿಕೊಂಡಿದ್ದ ಎಂದು ವರದಿಯಾಗಿದೆ. ಈತ ಪ್ರೀತಿಸುವಂತೆ ಒತ್ತಾಯಿಸಿದಾಗ ಮಹಿಳೆ ಹಾಗೂ ತನ್ನಿಂದ ದೂರವಿರುವಂತೆ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ ಹಾಗೂ ಈತನಿಗೆ ಬುದ್ಧಿವಾದ ಹೇಳಿದ್ದಾರೆ. ಆದರೂ ಕಾರ್ತಿಕ್ ಆ ಮಹಿಳೆಗೆ ಕಿರುಕುಳ ನೀಡುತ್ತಲೇ ಇದ್ದ ಎಂದು ಹೇಳಲಾಗಿದೆ. ಆಕೆ ಮತ್ತು ಆಕೆಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದನಂತೆ. ಕಗ್ಗದಾಸಪುರದಲ್ಲಿ ತನ್ನ ಪತಿಯೊಂದೊಗೆ ವಾಸಿಸುತ್ತಿದ್ದ ಮಹಿಳೆ ಜೂನ್‌ನಲ್ಲಿ ತನ್ನ ಪೋಷಕರ ಮನೆಗೆ ಹೋಗಿದ್ದಾಗ ತಂದೆಗೆ ವಿಷಯ ತಿಳಿಸಿದ್ದಾರೆ.
ಜುಲೈ 17 ರಂದು ಮಧ್ಯಾಹ್ನ, ಕಾರ್ತಿಕ್ ಮಹಿಳೆಯ ತಂದೆಗೆ ಕರೆ ಮಾಡಿ ಮಲ್ಲೇಶ್ವರಂನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಬಂದು ತನ್ನೊಡನೆ ಮಾತನಾಡುವಂತೆ ಒತ್ತಾಯಿಸಿದ್ದಾನೆ. ನಂತರ ಮಹಿಳೆಯ ತಂದೆ, ಮಹಿಳೆಯ ಸೋದರಸಂಬಂಧಿ ಪ್ರಶಾಂತ ಜೊತೆಗೆ ಸ್ಕೂಟರ್‌ನಲ್ಲಿ ಸ್ಥಳಕ್ಕೆ ಹೋದರು. ಕಾರ್ತಿಕ್ ಅವರಿಗೆ ತನ್ನ ಜೊತೆ ಚರ್ಚಸಿಲು ವಿಭೂತಿಪುರದ ಕಡೆಗೆ ಬರುವಂತೆ ತಿಳಿಸಿದ್ದಾನೆ. ಅವರು ಆತನಿಗೆ ಬುದ್ಧಿಹೇಳಲು ಸ್ಕೂಟರಿನಲ್ಲಿ ಆತನೊಂದಿಗೆ ತೆರಳಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ತಂದೆ ಸ್ಕೂಟರ್ ಸವಾರಿ ಮಾಡುವಾಗ, ಪ್ರಶಾಂತ ಮಧ್ಯದಲ್ಲಿ ಮತ್ತು ಕಾರ್ತಿಕ್ ಹಿಂದೆ ಕುಳಿತಿದ್ದಾಗ, ಆರೋಪಿ ಚಾಕುವನ್ನು ಹೊರತೆಗೆದು ಪ್ರಶಾಂತನ ಕತ್ತು ಕೊಯ್ದಿದ್ದಾನೆ ಹಾಗೂ ಇಬ್ಬರನ್ನೂ ಕೊಂದು ತಪ್ಪಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ತಂದೆ ತಕ್ಷಣವೇ ವಾಹನ ನಿಲ್ಲಿಸಿದರು. ಆಗ ಅವರಿಗೂ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಇದನ್ನು ನೋಡಿ ಸ್ಥಳೀಯರೂ ಆಗಮಿಸಿದಾಗ ಕಾರ್ತಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಪ್ರಶಾಂತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೂರಿನ ನಂತರ, ಪೊಲೀಸರು ಸೆಲ್ವ ಕಾರ್ತಿಕ್ ವಿರುದ್ಧ ಕೊಲೆಯತ್ನ ಮತ್ತು ಇತರ ಸಂಬಂಧಿತ ಆರೋಪಗಳ ಪ್ರಕರಣವನ್ನು ದಾಖಲಿಸಿದ್ದಾರೆ, ಆತನನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement