2 ಮತದಾರರ ಗುರುತಿನ ಚೀಟಿ; ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಚುನಾವಣಾ ಆಯೋಗದಿಂದ ನೋಟಿಸ್

ನವದೆಹಲಿ : ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ “ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಕ್ಕಾಗಿ” ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ಮಂಗಳವಾ ನೋಟಿಸ್ ಜಾರಿ ಮಾಡಿದೆ.
ಈ ನೋಟಿಸ್ ಅನ್ನು ನವದೆಹಲಿಯ ಜಿಲ್ಲಾ ಚುನಾವಣಾ ಅಧಿಕಾರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ ನಲ್ಲಿ ಅಧಿಕೃತ ಆದೇಶದ ಪ್ರತಿಯೊಂದಿಗೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 8ರಂದು ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸಿಗೆ ಉತ್ತರಿಸಲು ಕಾಂಗ್ರೆಸ್ ನಾಯಕ ಪವನ್ ಅವರಿಗೆ ಸೂಚಿಸಲಾಗಿದೆ.
ಬಿಜೆಪಿಯು ನವದೆಹಲಿ ಮತ್ತು ಜಂಗ್‌ಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಪವನ್‌ ಖೇರಾ ಅವರಿಗೆ ಚುನಾವಣಾ ಫೋಟೋ ಗುರುತಿನ ಚೀಟಿ ಇದೆ ಎಂದು ಹೇಳಿದೆ.

ಚುನಾವಣಾ ಆಯೋಗವು ಎಲ್ಲಾ ಪ್ರಕರಣಗಳಲ್ಲಿ “ಒಂದೇ ರೀತಿಯ ವೇಗದ ಪ್ರತಿಕ್ರಿಯೆಯನ್ನು ತೋರಿಸುತ್ತದೆ ಎಂದು ತಾನು ಆಶಿಸುವುದಾಗಿ ಖೇರಾ ವ್ಯಂಗ್ಯವಾಡಿದ್ದಾರೆ. ಈ ವಿಷಯವು ವಾಸ್ತವವಾಗಿ ಕಾಂಗ್ರೆಸ್ ಪ್ರಕರಣವನ್ನು ಬಲಪಡಿಸಿದೆ ಮತ್ತು ಪ್ರಸ್ತುತ ರೂಪದಲ್ಲಿ ಮತದಾರರ ಪಟ್ಟಿಗಳು ಹಲವಾರು ದೋಷಗಳನ್ನು ಹೊಂದಿವೆ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಅವರು ಹೇಳಿದರು.
ಮಂಗಳವಾರ ಮಧ್ಯಾಹ್ನ X ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ನವದೆಹಲಿ ಜಿಲ್ಲೆಯ ಜಿಲ್ಲಾ ಚುನಾವಣಾ ಕಚೇರಿಯು ನೋಟಿಸ್‌ನ ಪ್ರತಿಯನ್ನು ಹಂಚಿಕೊಂಡಿದೆ ಮತ್ತು “ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿದ್ದಕ್ಕಾಗಿ ಪವನ್ ಖೇರಾ ಅವರಿಗೆ ನೋಟಿಸ್” ಎಂದು ಬರೆದಿದೆ.

ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಎರಡು ಎಪಿಕ್‌ (EPIC) ಸಂಖ್ಯೆಗಳಾದ SJE0755967 ಮತ್ತು XHC1992338 ಹೊಂದಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. “ನಿಮಗೆ ತಿಳಿದಿರುವಂತೆ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದು ಜನತಾ ಪ್ರಾತಿನಿಧ್ಯ ಕಾಯ್ದೆ 1950 ರ ಅಡಿಯಲ್ಲಿ ದಂಡನೀಯ ಅಪರಾಧವಾಗಿದೆ” ಎಂದು ಚುನಾವಣಾ ನೋಂದಣಿ ಅಧಿಕಾರಿ ಬರೆದಿದ್ದಾರೆ. ಖೇರಾ ಸೆಪ್ಟೆಂಬರ್ 8 ರ ಸೋಮವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಅಧಿಕಾರಿ ಕೇಳಿದ್ದಾರೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement