ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆ : ಎಬಿವಿಪಿಗೆ ಭರ್ಜರಿ ಗೆಲುವು

ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ (DUSU) 2025 ರ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಾಧಿಸಿದೆ. ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯ ಪ್ರಮುಖ ಹುದ್ದೆಗಳನ್ನು ಎಬಿವಿಪಿ ಗೆದ್ದುಕೊಂಡಿತು. ಆದರೆ ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ (NSUI) ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಅಧ್ಯಕ್ಷ ಸ್ಥಾನಕ್ಕೆ ಎಬಿವಿಪಿಯ ಆರ್ಯನ್ ಮಾನ್ 28,841 ಮತಗಳನ್ನು ಪಡೆದು ಭಜರ್ರಿ ಹಯಗಳಿಸಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಎನ್‌ಎಸ್‌ಯುಐನ ಜೋಸ್ಲಿನ್ ಚೌಧರಿ 12,645 ಮತಗಳನ್ನು ಮತ್ತು ಎಸ್‌ಎಫ್‌ಐ-ಎಐಎಸ್‌ಎ (SFI-AISA) ಅಭ್ಯರ್ಥಿ 5,385 ಮತಗಳನ್ನು ಪಡೆದರು. ಎನ್‌ಎಸ್‌ಯುಐ ಬಂಡಾಯ ಅಭ್ಯರ್ಥಿ 5,522 ಮತಗಳನ್ನು ಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ, ಎನ್‌ಎಸ್‌ಯುಐನ ರಾಹುಲ್ ಜಾನ್ಸ್ಲಾ 29,339 ಮತಗಳನ್ನು ಪಡೆದು ಜಯಗಳಿಸಿದರು. ಎಬಿವಿಪಿ(ABVP)ಯ ಗೋವಿಂದ ತನ್ವರ್ (20,547 ಮತಗಳು) ಮತ್ತು ಎಸ್‌ಎಫ್‌ಐ-ಎಐಎಸ್‌ಎ ಅಭ್ಯರ್ಥಿ (4,163 ಮತಗಳು) ಅವರು ಪರಾಭವಗೊಂಡರು. ಕಾರ್ಯದರ್ಶಿ ಸ್ಥಾನಕ್ಕೆ ಎಬಿವಿಪಿಯ ಕುನಾಲ್ ಚೌಧರಿ 23,779 ಮತಗಳನ್ನು ಪಡೆದು ಜಯಗಳಿಸಿದರು. ಎನ್‌ಎಸ್‌ಯುಐ ಅಭ್ಯರ್ಥಿ (16,177 ಮತಗಳು) ಮತ್ತು ಎಸ್‌ಎಫ್‌ಐ-ಎಐಎಸ್‌ಎ ಅಭ್ಯರ್ಥಿ (9,535 ಮತಗಳು) ಪರಾಭವಗೊಂಡರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ದೀಪಿಕಾ ಝಾ (ABVP) 21,825 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎನ್‌ಎಸ್‌ಯುಐ ಅಭ್ಯರ್ಥಿ (17,380 ಮತಗಳು) ಮತ್ತು ಎಸ್‌ಎಫ್‌ಐ-ಎಐಎಸ್‌ಎ ಅಭ್ಯರ್ಥಿ (8,425 ಮತಗಳು) ಪರಾಭವಗೊಂಡರು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಗೆದ್ದ ಪ್ರಮುಖರು:
ಅಧ್ಯಕ್ಷ: ಆರ್ಯನ್ ಮಾನ್ (ABVP)
ಉಪಾಧ್ಯಕ್ಷ: ರಾಹುಲ್ ಝಾನ್ಸಲಾ (NSUI)
ಕಾರ್ಯದರ್ಶಿ: ಕುನಾಲ್ ಚೌಧರಿ (ABVP)
ಜಂಟಿ ಕಾರ್ಯದರ್ಶಿ: ದೀಪಿಕಾ ಝಾ (ABVP)
ಎಬಿವಿಪಿ ತನ್ನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆರ್ಯನ್ ಮಾನ್ ಅವರನ್ನು ಕಣಕ್ಕಿಳಿಸಿತ್ತು. ಹರಿಯಾಣದ ಬಹದ್ದೂರಗಢದಿಂದ ಬಂದ ಮಾನ್, ಹಂಸರಾಜ್ ಕಾಲೇಜಿನಿಂದ ಪದವೀಧರರಾಗಿದ್ದು, ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಎಂಎ ಪದವಿ ಪಡೆಯುತ್ತಿದ್ದಾರೆ. ವರ್ಷಗಳಲ್ಲಿ, ಶುಲ್ಕ ಹೆಚ್ಚಳದ ವಿರುದ್ಧದ ಅಭಿಯಾನಗಳು ಮತ್ತು ವಿಶ್ವವಿದ್ಯಾಲಯದ ಮೂಲಸೌಕರ್ಯವನ್ನು ಸುಧಾರಿಸುವ ಉಪಕ್ರಮಗಳು ಸೇರಿದಂತೆ ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಚಳುವಳಿಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಮಾನ್ ಒಬ್ಬ ಉತ್ಸಾಹಿ ಫುಟ್ಬಾಲ್ ಆಟಗಾರ.
ಗುರುವಾರ ನಡೆದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (DUSU) ಚುನಾವಣೆಯಲ್ಲಿ 50 ಕ್ಕೂ ಹೆಚ್ಚು ಘಟಕ ಕಾಲೇಜುಗಳಲ್ಲಿ 2.75 ಲಕ್ಷಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದರು. 195 ಬೂತ್‌ಗಳನ್ನು ಹೊಂದಿರುವ 52 ಕೇಂದ್ರಗಳಲ್ಲಿ ಮತದಾನವನ್ನು ನಡೆಸಲಾಯಿತು, ಅಲ್ಲಿ 711 ಎಲೆಕ್ಟ್ರಾನಿಕ್ ಮತಗಟ್ಟೆಗಳನ್ನು (EVM) ನಿಯೋಜಿಸಲಾಗಿತ್ತು. ಅಂತಿಮವಾಗಿ ಶೇ. 39.45 ರಷ್ಟು ಮತದಾನವಾಗಿತ್ತು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement