ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೆ ಸೈಬರ್ ವಂಚನೆಗೆ ಯತ್ನ ; ದೂರು ದಾಖಲು

ಬೆಂಗಳೂರು : ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚನೆಗೆ ಯತ್ನಿಸಿದ್ದು, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್‌ 5 ರಂದು ಸುಧಾಮೂರ್ತಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ ಹಾಗೂ ನಿಮ್ಮ ಮೊಬೈಲ್ ನಂಬರ್ ಅನ್ನು ಆಧಾರ್‌ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದು ಹೇಳಿ ವೈಯಕ್ತಿಕ ಮಾಹಿತಿ ನೀಡುವಂತೆ ಕೇಳಿದ್ದಾನೆ. ಅಲ್ಲದೇ ನಿಮ್ಮ ನಂಬರ್‌ನಿಂದ ಅಶ್ಲೀಲ ವೀಡಿಯೋ ಕಳಿಸಲಾಗುತ್ತಿದೆ, ಅದನ್ನ ನಾನು ಬ್ಲಾಕ್‌ ಮಾಡಿ ನಿಲ್ಲಿಸಿದ್ದೇನೆ ಎಂದು ಹೇಳಿದ್ದಾನೆ. ಮಾಹಿತಿ ನೀಡಿದಿದ್ದರೆ ಫೋನ್ ಸಂಖ್ಯೆಯ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾನೆ. ಆಗ ಅನುಮಾನಗೊಂಡ ಸುಧಾಮೂರ್ತಿ ಅವರು, ಎಚ್ಚೆತ್ತುಕೊಂಡು ಸೈಬರ್ ವಂಚಕರ ಟ್ರ‍್ಯಾಪ್‌ಗೆ ಒಳಗಾಗದೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ವಂಚಕನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement