ಬೇಲೆಕೇರಿ ಅಕ್ರಮ ಅದಿರು ರಫ್ತು ಪ್ರಕರಣ : ಬೆಂಗಳೂರು ಸೇರಿ ಹಲವು ಸ್ಥಳಗಳಲ್ಲಿ ಇ.ಡಿ. ಶೋಧ

ಬೆಂಗಳೂರು:  ಬೇಲೆಕೇರಿ ಬಂದರಿನ ಮೂಲಕ ನಡೆದಿದೆ ಎನ್ನಲಾದ ಅಕ್ರಮ ಕಬ್ಬಿಣದ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED)ದ ಬೆಂಗಳೂರು ವಲಯ ಕಚೇರಿಯು ಗುರುವಾರ ರಾಜ್ಯದ ಬೆಂಗಳೂರು, ಹೊಸಪೇಟೆ ಹಾಗೂ ಹರಿಯಾಣದ ರಾಜ್ಯದ ಗುರುಗ್ರಾಮ ಸೇರಿದಂತೆ ಒಟ್ಟು 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ಇ.ಡಿ. ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ತನಿಖಾ ದಳ (CBI) ದಾಖಲಿಸಿರುವ ಎಫ್‌ಐಆರ್‌ಗಳು ಮತ್ತು ಸಲ್ಲಿಸಿರುವ ದೋಷಾರೋಪ ಪಟ್ಟಿಗಳ ಆಧಾರದ ಮೇಲೆ, ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ನಿಬಂಧನೆಗಳ ಅಡಿಯಲ್ಲಿ ಈ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಈ ಅಕ್ರಮ ಕಬ್ಬಿಣದ ಅದಿರು ರಫ್ತಿನಿಂದ ಪ್ರಮುಖವಾಗಿ ಲಾಭ ಪಡೆದವರು ಎನ್ನಲಾದ ಎಂಎಸ್‌ಪಿಎಲ್ ಲಿಮಿಟೆಡ್ (ಬಾಲ್ಡೋಟಾ ಗ್ರೂಪ್), ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂ, ಅರ್ಷದ್ ಎಕ್ಸ್‌ಪೋರ್ಟ್ಸ್, ಎಸ್‌ವಿಎಂ ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಪ್ರೈ.ಲಿ. ಮತ್ತು ಆಲ್ಪೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಗಳು ಹಾಗೂ ಅವುಗಳ ಪ್ರಮುಖ ನಿರ್ವಹಣಾ ಸಿಬ್ಬಂದಿ ನಿವಾಸಗಳು ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ಇ.ಡಿ. ತಿಳಿಸಿದೆ.
ಆರೋಪಗಳೇನು?
ಶೋಧಕ್ಕೊಳಗಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಇರುವ ಮುಖ್ಯ ಆರೋಪವೆಂದರೆ, ಅವರು ಸೂಕ್ತ ತೆರಿಗೆ ಮತ್ತು ರಾಯಧನವನ್ನು ಪಾವತಿಸದೆ ಕಬ್ಬಿಣದ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ/ಖರೀದಿ/ಮಾರಾಟ/ಸಾಗಾಟ ಮಾಡಿದ್ದಾರೆ. ಇದರಿಂದ ರಾಜ್ಯದ ಖಜಾನೆಗೆ ದೊಡ್ಡ ನಷ್ಟ ಉಂಟಾಗಿದ್ದು, ಪರಿಸರಕ್ಕೆ ಅಪಾರ ಹಾನಿಯಾಗಿದೆ. ಈ ಸಂಸ್ಥೆಗಳು/ವ್ಯಕ್ತಿಗಳು ಅಪರಾಧದ ಮೂಲಕ ಗಳಿಸಿದ ಹಣವನ್ನು “ಕ್ರಮಬದ್ಧ” ಹಣ ಎಂದು ಬಿಂಬಿಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement