ಅವಳ ಹೆಜ್ಜೆ ಕಿರುಚಿತ್ರೋತ್ಸವ-2026″: ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರ ಸ್ಪರ್ಧೆ

ಬೆಂಗಳೂರು : ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ, ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ ಎರಡನೆಯ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ಮಹಿಳಾ ನಿರ್ದೇಶಕರಿಂದ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ನೋಂದಣಿಯನ್ನು ಆಹ್ವಾನಿಸಲಾಗಿದೆ. ಇದು ಮಹಿಳಾ ನಿರ್ದೇಶಕರಿಗೇ ಮೀಸಲಾದ ಕನ್ನಡ ಕಿರುಚಿತ್ರ ಸ್ಪರ್ಧೆಯಾಗಿದೆ.
ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ – ₹1,00,000 ನಗದು ಹಾಗೂ ಹಲವಾರು ವಿಶೇಷ ವಿಭಾಗಗಳಲ್ಲಿ ತಲಾ ಒಂದು ಕಿರುಚಿತ್ರಕ್ಕೆ ₹10,000 ನಗದು ನೀಡಲಾಗುತ್ತದೆ.
ನೋಂದಣಿ ವಿವರಗಳು:
ಸಲ್ಲಿಕೆಗೆ ಅರ್ಹತೆ: ನಿರ್ದೇಶಕರು ಮಹಿಳೆಯೇ ಆಗಿರಬೇಕು; 5–30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು ಸ್ಪರ್ಧೆಗೆ ಅರ್ಹವಾಗಿರುತ್ತವೆ.
ಪ್ರವೇಶ ಶುಲ್ಕ: ನವೆಂಬರ್‌ನಲ್ಲಿ ಉಚಿತ (ರಾಜ್ಯೋತ್ಸವ ವಿಶೇಷ); ಡಿಸೆಂಬರ್ 1 ರಿಂದ ಜನವರಿ 31, 2026 ರವರೆಗೆ ₹1,000
ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ | www.gubbivanitrust.ngo | WhatsApp: 8867747236 ಸಂಪರ್ಕಿಸಬಹುದು.
“ಅವಳ ಹೆಜ್ಜೆ ಕಿರುಚಿತ್ರೋತ್ಸವ ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಮಹಿಳಾ ಸಬಲೀಕರಣದ ಧ್ಯೇಯವುಳ್ಳ ಒಂದು ಸಾಂಸ್ಕೃತಿಕ ಚಳವಳಿ ಮತ್ತು ಲಿಂಗ ಸಮಾನತೆಯತ್ತ ಒಂದು ಅರ್ಥಪೂರ್ಣ ಹೆಜ್ಜೆ ಎಂದು ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಹೇಳುತ್ತಾರೆ.

ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement