ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಅರಣ್ಯದಲ್ಲಿ, ನೆಫಿಲಾ ಜಾತಿಗೆ ಸೇರಿದ ‘ಜೈಂಟ್ ವುಡ್ ಸ್ಪೈಡರ್’ ಎಂಬ ದೈತ್ಯ ಜೇಡ ಪತ್ತೆಯಾಗಿದೆ. ಈ ಜೇಡಗಳು ತಮ್ಮ ಬೃಹತ್ ಗಾತ್ರ ಮತ್ತು ಹಳದಿ ಬಣ್ಣದ ಬಲವಾದ ಬಲೆಗಳಿಗೆ ಹೆಸರುವಾಸಿಯಾಗಿದ್ದು, ಜೀವವೈವಿಧ್ಯ ಸಂಶೋಧಕರು ಇದನ್ನು ಪತ್ತೆಹಚ್ಚಿದ್ದಾರೆ.
ಅರೆನಿಡೇ ವರ್ಗದ ನೆಫಿಲಾ ಜಾತಿಗೆ ಸೇರಿದ ಈ ದೈತ್ಯ ಜೇಡ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ವ್ಯಾಪ್ತಿಯ ಅರಣ್ಯದಲ್ಲಿ ಪತ್ತೆಯಾಗಿದೆ.
ಇದು ಜೈಂಟ್ ವುಡ್ ಸ್ಪೈಡರ್ (Giant Wood Spider) ಅಥವಾ ಗೋಲ್ಡನ್ ಆರ್ಬ್- ವೀವಿಂಗ್ ಸ್ಪೈಡರ್(Golden Orb-Weaving Spider) ಎಂಬ ನೆಫಿಲಾ (Nephila) ಜಾತಿಗೆ ಸೇರಿದ ದೊಡ್ಡ ಗಾತ್ರದ ಜೇಡ. ಈ ಜೇಡಗಳು ತಮ್ಮ ಬೃಹತ್ ಗಾತ್ರ, ಬಲವಾದ, ಹಳದಿ ಬಣ್ಣದ ಹೊಳೆಯುವ ಬಲೆಗಳಿಗೆ (ವೆಬ್) ಹೆಸರುವಾಸಿಯಾಗಿವೆ.
ಸಾಮಾನ್ಯ ಜಾತಿಯ ಜೇಡಗಳು 3ರಿಂದ 5 ಮಿ.ಮೀ. ಇರುತ್ತವೆ. ಆದರೆ ನೆಫಿಲಾ ಜಾತಿಗೆ ಸೇರಿದ ಹೆಣ್ಣು ಜೇಡಗಳು ಸುಮಾರು 3 ಇಂಚು ಗಾತ್ರ ಹೊಂದಿರುತ್ತವೆ. ಆದರೆ ಗಂಡು ಜೇಡಗಳು ಚಿಕ್ಕದಾಗಿರುತ್ತವೆ. ಇವು ಹೆಚ್ಚಾಗಿ ಹೆಣ್ಣು ಜೇಡದ ಬಲೆಯ ಮೇಲೆ ವಾಸಿಸುತ್ತವೆ.
ಗೋಲ್ಡನ್ ಆರ್ಬ್ ವೀವರ್ ಜೇಡ”ವು ಗದಗದಂತಹ ಪ್ರದೇಶಗಳಲ್ಲಿ ಕಂಡು ಬರುವುದು ಅಪರೂಪ. ಇದನ್ನು ಈ ವಿಶಿಷ್ಟ ಜೇಡವನ್ನು ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್.ನಾಯಕ, ಸಂಗಮೇಶ ಕಡಗದ, ಶರಣು ಗೌಡರ ಪತ್ತೆ ಮಾಡಿದ್ದಾರೆ.
ಈ ಜೇಡಗಳಿಂದ ಮನುಷ್ಯರಿಗೆ ಅಪಾಯ ಇಲ್ಲ. ಈ ಜೇಡದಲ್ಲಿರುವ ವಿಷದ ಅಂಶ ಕೀಟಗಳನ್ನು ಹಿಡಿಯಲು ಬಳಕೆ ಆಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ