ಬೆಂಗಳೂರು : ರಾಜ್ಯದ ನಾಲ್ಕು ಪಟ್ಟಣ ಪಂಚಾಯತಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ಗೆ ಭಾರಿ ಮುಖಭಂಗವಾಗಿದೆ. ಎಲ್ಲ ನಾಲ್ಕೂ ಪಟ್ಟಣ ಪಂಚಾಯತಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಜಪೆ ಹಾಗೂ ಮೂಲ್ಕಿ ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯತ, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯತ, ಬೆಂಗಳೂರು ಗ್ರಾಮಾಂತರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕಾಂಗ್ರೆಸ್ ಭಾರಿ ಸೋಲು ಕಂಡಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಮತ್ತು ರಾಯಚೂರು ಜಿಲ್ಲೆಯ ತುರವಿಹಾಳ ಪಟ್ಟಣ ಪಂಚಾಯತ್ಗಳ ತಲಾ 1 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವಿನ ನಗೆ ಬೀರಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಜಪೆ ಹಾಗೂ ಮೂಲ್ಕಿ ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯತ, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯತ, ಬೆಂಗಳೂರು ಗ್ರಾಮಾಂತರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕಾಂಗ್ರೆಸ್ ಭಾರಿ ಸೋಲು ಕಂಡಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಮತ್ತು ರಾಯಚೂರು ಜಿಲ್ಲೆಯ ತುರವಿಹಾಳ ಪಟ್ಟಣ ಪಂಚಾಯತ್ಗಳ ತಲಾ 1 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವಿನ ನಗೆ ಬೀರಿದೆ.
ಬಜಪೆಯಲ್ಲಿ ಬಿಜೆಪಿ ಗೆಲುವು
ದಕ್ಷಿಣ ಕನ್ನಡದ ಬಜಪೆ ಪಟ್ಟಣ ಪಂಚಾಯತದ 19 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದು, ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್ ಕೇವಲ 4 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, ಎಸ್‌ಡಿಪಿಐ 3 ಸ್ಥಾನಗಳಲ್ಲಿ ಜಯಗಳಿಸಿದರೆ 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ರಿತೇಶ ಶೆಟ್ಟಿ ಬಜಪೆ ಪ.ಪಂ. 9ನೇ ವಾರ್ಡ್ ಶಾಂತಿಗುಡ್ಡೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎದುರಾಳಿ ಎಸ್‌ಡಿಪಿಐ ಅಭ್ಯರ್ಥಿ ರಫೀಕ್ ಅವರೆದುರು ಕೇವಲ ಒಂದು ಮತದ ಅಂತರದಿಂದ ಗೆಲುವು ಕಂಡಿದ್ದಾರೆ. ಚಲಾವಣೆಯಾದ 415 ಒಟ್ಟು ಮತಗಳ ಪೈಕಿ ರಿತೇಶ್ ಶೆಟ್ಟಿ (ಬಿಜೆಪಿ) 160, ರಫೀಕ್ (ಎಸ್‌ಡಿಪಿಐ) 159 ಮತಗಳನ್ನು ಪಡೆದರು.
ಗೆಲುವು ಕಂಡ ಬಿಜೆಪಿ ಅಭ್ಯರ್ಥಿಗಳು…
ಯಶೋಧಾ, ಪದ್ಮನಾಭ ಪೂಜಾರಿ, ಲೋಕೇಶ ಪೂಜಾರಿ, ಜಯಂತ ಪೂಜಾರಿ, ರಿತೇಶ ಶೆಟ್ಟಿ, ಸುಪ್ರೀತಾ ಶೆಟ್ಟಿ, ದಿನೇಶ ಶೆಟ್ಟಿ, ರಾಜೇಶ ಅಮೀನ್ ಆರ್.ಕೆ., ಮಲ್ಲಿಕಾ ಚಂದ್ರಶೇಖರ, ರಕ್ಷಿತಾ ಶರತ, ಶರ್ಮಿಳಾ ಶೆಟ್ಟಿ
ಗೆಲುವು ಕಂಡ ಕಾಂಗ್ರೆಸ್ ಅಭ್ಯರ್ಥಿಗಳು: ಜಾಕೋಬ್ ಪಿರೇರಾ, ಚೆನ್ನಪ್ಪ ಸಾಲ್ಯಾನ್, ಕಿರಣ, ಹಾಜಿರಾ ಫರ್ಜಾನ್
ಗೆದ್ದ ಎಸ್‌ಡಿಪಿಐ ಅಭ್ಯರ್ಥಿಗಳು: ಗುಲ್ಶನ್ ಕರೀಂ, ವೀಣಾ ಡಿಸೋಜಾ, ಆಯಿಷಾ ಬಜಪೆ
ಪಕ್ಷೇತರ : ಸಿರಾಜ್ ಹುಸೇನ್ ಬಜಪೆ
ಕಿನ್ನಿಗೋಳಿಯಲ್ಲಿಯೂ ಬಿಜೆಪಿ
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ 18 ಸ್ಥಾನಗಳ ಪೈಕಿ ಬಿಜೆಪಿ 10 ಸ್ಥಾನಗಳಲ್ಲಿ ಜಯಗಳಿಸಿದ್ದು, ಆಡಳಿತದ ಚುಕ್ಕಾಣಿ ಹಿಡಿದಿದೆ. ಉಳಿದ 8 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಜಯಗಳಿಸಿದ ಬಿಜೆಪಿಯ ಅಭ್ಯರ್ಥಿಗಳು: ಪದ್ಮಲತಾ ರಾವ್, ಲೋಕಯ್ಯ ಸಾಲ್ಯಾನ್, ಶೈಲೇಶ ಅಂಚನ್, ಗುರುರಾಜ ಮಲ್ಲಿಗೆಯಂಗಡಿ, ಗೋಪಾಲ ಪುನರೂರು, ಧನುಷ್ ಶೆಟ್ಟಿಗಾರ, ಮಲ್ಲಿಕಾ ಪ್ರಕಾಶ, ದಾಮೋದರ ಶೆಟ್ಟಿ, ಪ್ರಣೀಕ ಕಿನ್ನಿಗೋಳಿ, ಮಲ್ಲಿಕಾ ಗುತ್ತಕಾಡು.
ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳು : ಸುನಿತಾ ರೊಡ್ರಿಗಸ್, ಚಂದ್ರ ರಾಣ್ಯ, ಸಂತಾನ್ ಡಿಸೋಜಾ, ಪ್ರಕಾಶ ಆಚಾರ್ಯ, ಪ್ರತಿಮಾ ಪ್ರಶಾಂತ, ಕುಶಲತಾ ಹಾಗೂ ಸುನೀತಾ.
ಮಂಕಿಯಲ್ಲಿ ಬಿಜೆಪಿ ಮೇಲುಗೈ
ಪಟ್ಟಣ ಪಂಚಾಯತ ಆಗಿ ಘೋಷಣೆಯಾದ ನಂತರ ಮಂಕಿಯಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 20 ವಾರ್ಡ್‌ಗಳಲ್ಲಿ ಬಿಜೆಪಿ 12 ಸ್ಥಾನಗಳನ್ನು ಜಯಗಳಿಸುವ ಮೂಲಕ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಕೇವಲ 8 ಸ್ಥಾನಗಳಲ್ಲಿ ಜಯಗಳಿಸಿದೆ.
ಬಿಜೆಪಿಯಿಂದ ಜಯಗಳಿಸಿದ ಅಭ್ಯರ್ಥಿಗಳು : ಜ್ಯೋತಿ ಸತೀಶ ಖಾರ್ವಿ (ವಾರ್ಡ್ 1), ಮೀನಾಕ್ಷಿ ಕೃಷ್ಣ ಹಸ್ಲರ (ವಾರ್ಡ್ 2), ಆನಂದ ಗಣಪತಿ ನಾಯ್ಕ (ವಾರ್ಡ್ 3), ಸವಿತಾ ಮಲ್ಲಯ್ಯ ನಾಯ್ಕ (ವಾರ್ಡ್ 7), ಪೀಟರ್ ಎಸ್. ರೊಡ್ರಿಗೀಸ್ (ವಾರ್ಡ್ 8), ಗೀತಾ ರಮಾಕಾಂತ ಹರಿಕಂತ್ರ (ವಾರ್ಡ್ 9), ಸತೀಶ ದೇವಪ್ಪ ನಾಯ್ಕ (ವಾರ್ಡ್ 11), ರೇಖಾ ಗಿರೀಶ ನಾಯ್ಕ (ವಾರ್ಡ್ 13), ನೇತ್ರಾವತಿ ಈಶ್ವರ ಗೌಡ (ವಾರ್ಡ್ 14), ರವಿ ಉಮೇಶ ನಾಯ್ಕ (ವಾರ್ಡ್ 15), ವಿಜಯಾ ಮೋಹನ ನಾಯ್ಕ (ವಾರ್ಡ್ 18) ಹಾಗೂ ಸವಿತಾ ಹನುಮಂತ ನಾಯ್ಕ (ವಾರ್ಡ್ 20) ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ಸಿನಿಂದ ಜಯಗಳಿಸಿದ ಅಭ್ಯರ್ಥಿಗಳು…: ರೇಷ್ಮಾ ಫರ್ನಾಂಡಿಸ್ (ವಾರ್ಡ್ 4), ಮಹಮ್ಮದ್ ಸಿದ್ದಿಕ್ ಹಸನ್ ಬಾಪು (ವಾರ್ಡ್ 5), ರಹಮತುಲ್ಲಾ ಬೊಟ್ಲೇರ (ವಾರ್ಡ್ 6), ಗಜಾನನ ಬಾಲಯ್ಯ ನಾಯ್ಕ (ವಾರ್ಡ್ 10), ಸಂಜೀವ ಗಂಗಾಧರ ನಾಯ್ಕ (ವಾರ್ಡ್ 12), ಉಲ್ಲಾಸ ಅಂಗದ ನಾಯ್ಕ (ವಾರ್ಡ್ 16), ಉಷಾ ಕೃಷ್ಣ ನಾಯ್ಕ (ವಾರ್ಡ್ 17) ಮತ್ತು ವಿನಾಯಕ ಮೊಗೇರ (ವಾರ್ಡ್ 19) ಜಯಗಳಿಸಿದ್ದಾರೆ.
ಬಾಶೆಟ್ಟಿಹಳ್ಳಿ(ಬೆಂಗಳೂರು ಗ್ರಾಮಾಂತರ)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತದ ಚುನಾವಣೆಯಲ್ಲಿ ಒಟ್ಟು ಸ್ಥಾನ 19 ವಾರ್ಡ್‌ಗಳಿದ್ದು ಬಿಜೆಪಿಯು 15 ವಾರ್ಡುಗಳಲ್ಲಿ ಜಯಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ. ಉಳಿದಂತೆ ಕಾಂಗ್ರೆಸ್ 3ರಲ್ಲಿ ಜಯಗಳಿಸಿದೆ.
ಗೆಲುವು ಕಂಡ ಬಿಜೆಪಿ ಅಭ್ಯರ್ಥಿಗಳು: 1 ನೇ ವಾರ್ಡ್ ಬಿಜೆಪಿಯ ಶ್ವೇತ ಮುರುಳೀಧರ, 2ನೇ ವಾರ್ಡ್ ಬಿಜೆಪಿಯ ಪ್ರೇಮಕುಮಾರ, 3ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ, 5ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ.ಕೆ, 6ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ, 7ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಮಧುಕುಮಾರ, 8ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಮುನಿಶಂಕರ, 11ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ. ಬಿ, 12ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಸಿ.ನಾರಾಯಣಸ್ವಾಮಿ, 13ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಲೀಲಾ ಮಹೇಶ, 14ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಎಸ್.ಪ್ರೇಮಕುಮಾರ, 15ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಅಂಬುಜಾಕ್ಷಿ, 17ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಕೆ.ನೇತ್ರಾ ಮಧುಕುಮಾರ, 18ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ರಾಧಾಮಣಿ.
ಕಾಂಗ್ರೆಸ್ಸಿನಿಂದ ಆಯ್ಕೆಯಾದವರು: 10ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಅರುಣಕುಮಾರ, 16ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಪುಷ್ಪ.ಎಲ್ ಹಾಗೂ 19ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ದಾಕ್ಷಾಯಿಣಿ,
ಜೆಡಿಎಸ್; 9ನೇ ವಾರ್ಡ್ ಅಭ್ಯರ್ಥಿ ಜೆಡಿಎಸ್ ಚಂದನ .ಎನ್ ಅವರು ಜಯಗಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ