ಮಹಾರಾಷ್ಟ್ರದ ಪಾಲಿಕೆ ಚುನಾವಣೆ ; ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪಿಗೆ ಜಯ

ಜಲ್ನಾ: ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ ಅವರ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ ಪಂಗಾರ್ಕರ್, ಮಹಾರಾಷ್ಟ್ರದ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಜಲ್ನಾ ನಗರ ಸಭೆಯ ವಾರ್ಡ್ ಸಂಖ್ಯೆ 13ರಲ್ಲಿ ಸ್ಪರ್ಧಿಸಿದ್ದ ಪಂಗಾರ್ಕರ್, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ರಾವಸಾಹೇಬ ಧೋಬ್ಲೆ ಅವರನ್ನು ಸೋಲಿಸಿದ್ದಾರೆ. ಪಂಗಾರ್ಕರ್ 2,661 ಮತಗಳನ್ನು ಪಡೆದರೆ, ಧೋಬ್ಲೆ 2,477 ಮತಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.ಈ ಫಲಿತಾಂಶವು ತೀವ್ರ ಚರ್ಚೆಗೆ  ಕಾರಣವಾಗಿದೆ. ಪಂಗಾರ್ಕರ್ ಈ ಹಿಂದೆ ಅವಿಭಜಿತ ಶಿವಸೇನೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಈ ಹಿಂದೆ ಕೂಡ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದರು ಎಂಬುದು ಗಮನಾರ್ಹ.
2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ  ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಪಂಗಾರ್ಕರ್ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯನ್ನು ಸೇರಿದ್ದರು. ಆದರೆ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಂದೆ ಅವರು ಆತನ ಪಕ್ಷ ಸೇರ್ಪಡೆಯನ್ನು ತಡೆಹಿಡಿದಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement