ಪೌರಾಯುಕ್ತೆಗೆ ಧಮ್ಕಿ ; ಕಾಂಗ್ರೆಸ್‌ ಮುಖಂಡ ರಾಜೀವ ಗೌಡ ಬಂಧನ

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತರಾದ ಅಮೃತಾ ಗೌಡ ಅವರಿಗೆ ಧಮ್ಕಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಗಡಿಯಲ್ಲಿ ರಾಜೀವ ಗೌಡ ಬಂಧನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಲ್ಟ್‌ ಸಿನೆಮಾದ ಬ್ಯಾನರ್ ತೆರವು ಸಂಬಂಧ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದಿಸಿ, ಬೆದರಿಕೆ ಹಾಕಿದ್ದರು. ಈ ಸಂಬಂಧ ಪೌರಾಯುಕ್ತೆ ಅಮೃತಾಗೌಡ ದೂರು ನೀಡಿದ ನಂತರ ರಾಜೀವ ಗೌಡ ವಿರುದ್ದ ಎಫ್‌ಐಆರ್ ದಾಖಲಾಗಿತ್ತು.
ದೂರಿನ ಬಳಿಕ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದರು. ಎಫ್ ಐಆರ್ ರದ್ದುಕೋರಿ ರಾಜೀವ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು. ಈಗಾಗಲೇ ಕೆಪಿಸಿಸಿ ಶಿಸ್ತು ಸಮಿತಿಯು ರಾಜೀವ ಗೌಡರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದೆ. ರಾಜೀವ ಗೌಡ ಅವರನ್ನು ಕೊನೆಗೂ ಕೇರಳ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement