
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಗಾಗಿ ಸುದ್ದಿ ಜಾಲತಾಣ ‘ನ್ಯೂಸ್‌ಕ್ಲಿಕ್’ (NewsClick) ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯ (ED) ಸೋಮವಾರ 184 ಕೋಟಿ ರೂಪಾಯಿ ದಂಡ ವಿಧಿಸಿದೆ. ತನಿಖಾ ಸಂಸ್ಥೆಯ ಆದೇಶದ ಪ್ರಕಾರ, ಪೋರ್ಟಲ್‌ನ ಮಾಲೀಕತ್ವ ಹೊಂದಿರುವ ‘ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ 120 ಕೋಟಿ ರೂ. ಹಾಗೂ ಪ್ರಬೀರ್ ಪುರಕಾಯಸ್ಥ ಅವರಿಗೆ 64 ಕೋಟಿ ರೂ. ದಂಡ ವಿಧಿಸಲಾಗಿದೆ.
ಈ ನಿಯಮ ಉಲ್ಲಂಘನೆಗಳು ವ್ಯವಸ್ಥಿತವಾದವು ಮತ್ತು ಉದ್ದೇಶಪೂರ್ವಕವಾದವು ಎಂದು ತೀರ್ಪು ನೀಡುವ ಪ್ರಾಧಿಕಾರ (Adjudicating Authority) ಗಮನಿಸಿದೆ. ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ವ್ಯವಹಾರಗಳು ಮತ್ತು ನಿಯಂತ್ರಕ ಪ್ರಾಧಿಕಾರಗಳಿಗೆ ನೀಡಲಾದ ಶಾಸನಬದ್ಧ ಘೋಷಣೆಗಳ ಉಲ್ಲಂಘನೆಯು ಇದರಲ್ಲಿ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಳವಣಿಗೆಯ ಕುರಿತು ನ್ಯೂಸ್‌ಕ್ಲಿಕ್‌ನಿಂದ ಪ್ರತಿಕ್ರಿಯೆ ನೀಡಬೇಕಿದೆ.



ನಿಮ್ಮ ಕಾಮೆಂಟ್ ಬರೆಯಿರಿ