ಬೆಂಗಳೂರು | ಲಿವ್-ಇನ್ ಸಂಗಾತಿ ಕೊಲೆ ಪ್ರಕರಣ ; ನಟಿ ಸೇರಿ ಮೂವರ ಬಂಧನ

 ಬೆಂಗಳೂರು: ಬೆಂಗಳೂರಿನ ಮಂಜುನಾಥನಗರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ಸೇರಿ ತನ್ನ ಲಿವ್-ಇನ್ ಸಂಗಾತಿಯನ್ನೇ ಕಿರುತೆರೆ ನಟಿಯೊಬ್ಬಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಫೆಬ್ರವರಿ 18 ರಂದು ನಡೆದಿದ್ದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ನಟಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ದುರ್ದೈವಿಯನ್ನು ಮೋಹನ್  ಎಂದು ಗುರುತಿಸಲಾಗಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಊರ್ಮಿಳಾ ಅಲಿಯಾಸ್ ಬಿಂದು, ಆಕೆಯ ಹೊಸ ಪ್ರಿಯಕರ  ಮತ್ತು ಮತ್ತೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮದುವೆಗೆ ಅಡ್ಡಿಯಾಗಿದ್ದಕ್ಕೆ ಸ್ಕೆಚ್!
ಪೊಲೀಸ್ ತನಿಖೆಯ ಪ್ರಕಾರ,  ಬಿಂದು ಮತ್ತು ಮೋಹನ್  ಳೆದ ಕೆಲವು ಸಮಯದಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ ಈ ನಡುವೆ ಬಿಂದುಗೆ ಮತ್ತೊಬ್ಬನ ಜೊತೆ ಪ್ರೇಮ ಸಂಬಂಧ ಬೆಳೆದಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮೋಹನ್ ರಾವ್ ಈ ಮದುವೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ, ಆತನನ್ನು ತಮ್ಮ ದಾರಿಯಿಂದ ಹೊರಹಾಕಲು ಪಕ್ಕಾ ಪ್ಲಾನ್ ಮಾಡಿದ್ದರು.
ಪಾರ್ಟಿ ಹೆಸರಲ್ಲಿ ನಡೆದ ಭೀಕರ ಹತ್ಯೆ
ಸಂಚಿನ ಭಾಗವಾಗಿ ಫೆಬ್ರವರಿ 18 ರಂದು ಬಿಂದು ಮತ್ತು ಮೋಹನ್ ವಾಸವಿದ್ದ ಮನೆಯಲ್ಲೇ ಮದ್ಯದ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯ ನಡುವೆ ಹೊಸ ಪ್ರಿಯಕರ ಮತ್ತು ಆತನ ಸ್ನೇಹಿತ ಸೇರಿ ಮೋಹನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ಈ ವೇಳೆ ಮೋಹನ ಕಿರುಚಾಡಬಾರದೆಂದು ಬಿಂದು ಆತನ ಕೈಕಾಲು ಕಟ್ಟಿ, ಬಾಯಿ ಮತ್ತು ಮೂಗಿಗೆ ಪ್ಲಾಸ್ಟರ್ (ಟೇಪ್) ಅಂಟಿಸಿದ್ದಾಳೆ ಎನ್ನಲಾಗಿದೆ. ತೀವ್ರ ರಕ್ತಸ್ರಾವ ಮತ್ತು ಉಸಿರುಗಟ್ಟಿದ ಪರಿಣಾಮ ಮೋಹನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ವಾಸನೆಯಿಂದ ಬಯಲಾದ ರಹಸ್ಯ
ಕೊಲೆ ಮಾಡಿದ ನಂತರ ಆರೋಪಿಗಳು ಮನೆಯನ್ನು ಲಾಕ್ ಮಾಡಿ ಪರಾರಿಯಾಗಿದ್ದರು. ಸುಮಾರು 12 ದಿನಗಳ ಕಾಲ ಶವ ಮನೆಯಲ್ಲೇ ಕೊಳೆಯುತ್ತಿತ್ತು. ಮನೆಯಿಂದ ಅಸಹನೀಯ ವಾಸನೆ ಬರಲಾರಂಭಿಸಿದಾಗ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಮುರಿದು ಒಳಹೋದಾಗ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ.
ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಮೂವರನ್ನು ಸೆರೆಹಿಡಿದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement