ರಾಜ್ಯಸಭಾ ಚುನಾವಣೆ: ಬಿಜೆಪಿ ಅಧ್ಯಕ್ಷ ನಿತಿನ್ ನವೀನ ಸೇರಿ 9 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ನವದೆಹಲಿ: ಮಾರ್ಚ್ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಮಂಗಳವಾರ 9 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಬಿಹಾರದಿಂದ ಕಣಕ್ಕಿಳಿಯಲಿದ್ದಾರೆ.
ರಾಜ್ಯವಾರು ಅಭ್ಯರ್ಥಿಗಳ ವಿವರ ಹೀಗಿದೆ:
ಬಿಹಾರ : ನಿತಿನ್ ನವೀನ (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ಮತ್ತು ಶಿವೇಶಕುಮಾರ
ಅಸ್ಸಾಂ : ತೇರಾಶ್ ಗೋವಾಲಾ ಮತ್ತು ಜೋಗನ್ ಮೋಹನ
ಒಡಿಶಾ: ಮನಮೋಹನ ಸಾಮಲ್ ಮತ್ತು ಸುಜೀತಕುಮಾರ
ಹರಿಯಾಣ: ಸಂಜಯ ಭಾಟಿಯಾ
ಛತ್ತೀಸ್‌ಗಢ : ಲಕ್ಷ್ಮಿ ವರ್ಮಾ
ಪಶ್ಚಿಮ ಬಂಗಾಳ : ರಾಹುಲ್ ಸಿನ್ಹಾ

ಅಭ್ಯರ್ಥಿಗಳ ಹಿನ್ನೆಲೆ:
ನಿತಿನ್‌ ನವೀನ : ಇವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇದಕ್ಕೋ ಮೊದಲು ಇವರು ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಐದು ಸಲ ಬಿಹಾರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಸಂಜಯ ಭಾಟಿಯಾ: ಇವರು 2019-2024ರ ಅವಧಿಯಲ್ಲಿ ಕರ್ನಾಲ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. 2019ರಲ್ಲಿ 6.5 ಲಕ್ಷಕ್ಕೂ ಅಧಿಕ ಮತಗಳ ದಾಖಲೆ ಅಂತರದಿಂದ ಜಯಗಳಿಸಿದ್ದರು.
ಜೋಗನ್ ಮೋಹನ: ಪ್ರಸ್ತುತ ಅಸ್ಸಾಂನ ಹಿಮಂತ ಬಿಸ್ವ ಶರ್ಮಾ ಸರ್ಕಾರದಲ್ಲಿ ಸಾರಿಗೆ ಮತ್ತು ಬುಡಕಟ್ಟು ಸಂಸ್ಕೃತಿ ಸೇರಿದಂತೆ ಹಲವು ಇಲಾಖೆಗಳ ಸಚಿವರಾಗಿದ್ದಾರೆ.
ಮನಮೋಹನ ಸಮಲ್ : ಒಡಿಶಾದ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದಾರೆ.
ಸುಜೀತಕುಮಾರ: ಈ ಹಿಂದೆ ಬಿಜು ಜನತಾದಳದಲ್ಲಿದ್ದ (BJD) ಇವರು, 2024ರಲ್ಲಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಈಗ ಮತ್ತೆ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ.
ಲಕ್ಷ್ಮಿ ವರ್ಮಾ: ಛತ್ತೀಸ್‌ಗಢ ಬಿಜೆಪಿಯ ಹಿರಿಯ ಮಹಿಳಾ ನಾಯಕಿ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಹುಲ್ ಸಿನ್ಹಾ: ಇವರು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷರಾಗಿದ್ದಾರೆ.
ತೇರಶ್ ಗೋವಲ್ಲ : ಇವರು ಅಸ್ಸಾಂನ ದಿಬ್ರುಗಢ ಜಿಲ್ಲೆಯ ದುಲಿಯಾಜನ್ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನಸಭಾ ಸದಸ್ಯರಾಗಿದ್ದಾರೆ.
ಶಿವೇಶಕುಮಾರ : ಈ ಹಿಂದೆ ಬಿಹಾರದ ಅಗಿಯಾನ್ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ (ಶಾಸಕ) ಸೇವೆ ಸಲ್ಲಿಸಿದ್ದರು.
ಮಾರ್ಚ್ 16 ರಂದು ಈ ಎಲ್ಲಾ ಸ್ಥಾನಗಳಿಗೆ ಮತದಾನ ನಡೆಯಲಿದೆ.

ಪ್ರಮುಖ ಸುದ್ದಿ :-   ಅಣ್ಣಾ ಹಜಾರೆ ಮುಂಬೈ ಆಸ್ಪತ್ರೆಯ ಐಸಿಯುಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement