ಕೋಲಾರ : ಬುಧವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ಅಪಘಾತದಲ್ಲಿ ಕಾರು ಮುರಿತಕ್ಕೆ ಒಳಗಾದ ವಿದ್ಯಾರ್ಥಿನಿಯೊಬ್ಬರು ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಬೆಡ್ ಮೇಲೆ ಪರೀಕ್ಷೆ ಬರೆದಿರುವುದು ವರದಿಯಾಗಿದೆ.
ಕೆಜಿಎಫ್ ತಾಲೂಕಿನ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಕುಸುಮಾ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಹಾಸಿಗೆಯ ಮೇಲೆ ಪರೀಕ್ಷೆ ಬರೆದಿದ್ದಾಳೆ.
ಕೆಜಿಎಫ್ ತಾಲೂಕಿನ ಚಿನ್ನಗನಹಳ್ಳಿ ನಿವಾಸಿ ಆಗಿರುವ ವಿದ್ಯಾರ್ಥಿನಿ ಕುಸುಮ ಹತ್ತನೇ ತರಗತಿ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದಳು. ಆದರೆ ಇತ್ತೀಚೆಗೆ ಕುಸುಮಾಗೆ ಅಪಘಾತ ಆಗಿ ಕಾಲು ಕಳೆದುಕೊಂಡಿದ್ದಳು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಧೃತಿಗೆಡದ ಕುಸುಮಾ ತಾಯಿ ಜೊತೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಬಿಇಒ ಅನುಮತಿ ಕೊಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ