ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಬೆಂಗಳೂರು : 2025ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಲಾಗಿದೆ. 2025ನೇ ಸಾಲಿನ “ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿಗೆ ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ.ವಸುಂಧರಾ ಭೂಪತಿ, ಡಾ.ಚಂದ್ರಶೇಖರ ಪೋಕಳೆ ಹಾಗೂ ಡಾ. ಎಸ್. ತುಕಾರಾಂ ಅವರು ಭಾಜನರಾಗಿದ್ದಾರೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ಬಹುಮಾನವನ್ನು ಒಳಗೊಂಡಿದೆ.
2025ನೇ ಸಾಲಿನ “ಸಾಹಿತ್ಯ ಶ್ರೀ” ಪ್ರಶಸ್ತಿಗೆ ಕಂಕನಾಡಿ ನಾರಾಯಣ, ಡಾ. ನಿಷ್ಠಿ ರುದ್ರಪ್ಪ, ಡಾ. ವೀರೇಶ ಬಡಿಗೇರ, ಡಾ. ಸಿ.ಜಿ. ಲಕ್ಷ್ಮೀಪತಿ, ರೂಪಾ ಹಾಸನ, ಜಯರಾಮ ರಾಯಪುರ, ಕುಮುದಾ ಸುಶೀಲ, ಡಾ. ಓ.ನಾಗರಾಜು, ಬಿ.ಎಂ.ಬಷೀರ್‌, ಜ್ಯೋತಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 25 ಸಾವಿರ ರೂ. ಒಳಗೊಂಡಿದೆ.

2024ರಲ್ಲಿ ಪ್ರಕಟಗೊಂಡಿರುವ 17 ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳಿಗೆ “2024ನೇ ಸಾಲಿನ ವರ್ಷದ ಪುಸ್ತಕ ಬಹುಮಾನ” ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಇದು ತಲಾ 25 ಸಾವಿರ ರೂ. ಒಳಗೊಂಡಿದೆ.
ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರು:
ಭಾರತೀದೇವಿ ಪಿ. ಅವರ ‘ಚಲಿಸುತ್ತಿವೆ ಚುಕ್ಕಿಗಳು’ (ಕಾವ್ಯ)
ಶಶಿ ತರೀಕೆರೆ ಅವರ ‘ಪ್ಯೂಪಾ’ (ಪ್ರಥಮ ಕವನ ಸಂಕಲನ)
ವೈ.ಎಸ್.ಹರಗಿ ಅವರ ‘ಇಮಾಮ್ ಸಾಹೇಬರ ಕುದುರೆ’ (ಕಾದಂಬರಿ)
ಅನಿಲ ಗುನ್ನಾಪುರ ಅವರ ‘ಸರ್ವೆ ನಂಬರ್-97’ (ಸಣ್ಣ ಕಥೆ)
ಡಾ.ಚಂದ್ರು ಕಾಳೇನಹಳ್ಳಿ ಅವರ ‘ಗಂಧವತಿ’ (ನಾಟಕ)
ಡಾ.ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’ (ಲಲಿತ ಪ್ರಬಂಧ)
ಮಲ್ಲಿಕಾರ್ಜುನ ಹುಲಗಬಾಳಿ ಅವರ ‘ತಿರುಗಾಟ’ (ಪ್ರವಾಸ ಸಾಹಿತ್ಯ)
ಎಂ.ಜಿ.ಹೆಗಡೆ ಅವರ ಆತ್ಮಕಥೆ ‘ಚಿಮಣಿ ಬೆಳಕಿನಿಂದ’ (ಜೀವನ ಚರಿತ್ರೆ/ಆತ್ಮಕಥೆ)
ಮಹಾಂತೇಶ ಪಾಟೀಲ ಅವರ ‘ಬೆಳಕು ಬೆಳೆಯುವ ಹೊತ್ತು’ (ಸಾಹಿತ್ಯ ವಿಮರ್ಶೆ)
ರಾಜಶೇಖರ ಕುಕ್ಕುಂದಾ ಅವರ ‘ಬಿಸಿ ಬಿಸಿ ಬಾತು’ (ಮಕ್ಕಳ ಸಾಹಿತ್ಯ)
ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ (ವಿಜ್ಞಾನ ಸಾಹಿತ್ಯ)
ಡಾ. ಎನ್.ಎನ್. ಚಿಕ್ಕಮಾದು ಅವರ ‘ಪ್ರಜಾಮಾತೆ’ (ಮಾನವಿಕ)
ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರ ‘ದಾಸೊಕ್ಕಲಿಗರು’ (ಸಂಶೋಧನೆ)
ದು.ಸರಸ್ವತಿ ಅವರ ‘ಜಾತಿ ಮತ್ತು ಲಿಂಗತ್ವ’ ಕೃತಿ (ಅನುವಾದ)
ಡಾ.ಹುಲಿಕುಂಟೆ ಮೂರ್ತಿ ಅವರ ‘ನುಡಿ ಕಂಡಾಯ’ (ಅಂಕಣ/ವೈಚಾರಿಕ ಬರಹ)
ಲಕ್ಷ್ಮಣ ಶರೆಗಾರ ಅವರ ‘ತಿದಿಯ ತುದಿಯ ಬೆಂಕಿಯ ಉಗುಳು’ (ಲೇಖಕರ ಮೊದಲ ಸ್ವತಂತ್ರ ಕೃತಿ)
ಡಾ.ಪ್ರದೀಪ ಕೆಂಜಿಗೆ ಅವರ ‘ನರವಾನರ’ ಕೃತಿ (ಸಂಕೀರ್ಣ)

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

11 ಕೃತಿ ವಿವಿಧ ದತ್ತಿ ಬಹುಮಾನ ಪ್ರಶಸ್ತಿಗೆ ಆಯ್ಕೆ
ಪ್ರೇಮಕುಮಾರ ಹರಿಯಬ್ಬೆ ಅವರ ಬಹುರೂಪಿ ಕೃತಿಗೆ ಚದುರಂಗ ದತ್ತಿ,
ಕಡಿದಾಳ್ ಪ್ರಕಾಶ ಅವರ ನನ್ನೂರಿನ ಶ್ರೀಸಾಮಾನ್ಯರು ಕೃತಿಗೆ ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ
ನ್ಯಾ.ಶಿವರಾಜ ವಿ.ಪಾಟೀಲ ಅವರ ಕಳೆದ ಕಾಲ ನಡೆದ ದೂರ ಕೃತಿಗೆ ಸಿಂಪಿ ಲಿಂಗಣ್ಣ ದತ್ತಿ
ಡಾ.ಎಚ್.ಲಕ್ಷ್ಮೀನಾರಾಯಣ ಸ್ವಾಮಿ ಅವರ ಒಳಮೀಸಲಾತಿ ಮತ್ತು ಇತರೆ ಲೇಖನಗಳು ಕೃತಿಗೆ ಪಿ.ಶ್ರೀನಿವಾಸರಾಜು ದತ್ತಿ
ಅಭೀಷೇಕ ಬಳೆಮಸರಕಲ್ ಅವರ ಆಕೆ ಒಂದು ಹೂವು ಒಂದು ಹಿಡಿ ಮಣ್ಣು ಕೃತಿಗೆ ಚಿ.ಶ್ರೀನಿವಾಸರಾಜು ದತ್ತಿ
ಕಾರ್ತಿಕ ಆರ್. ಅವರ ಸತ್ತವರ ಸೊಲ್ಲು ಕೃತಿಗೆ ಎಲ್.ಗುಂಡಪ್ಪ ಶಾರದಮ್ಮ ದತ್ತಿ
ಶೈಲಜಾ ಆಶ್ವಥ್ ಕೋಲಾರ ಅವರ ರಾಕ್ಷಸರ ನಡುವೆ ಪಯಣ ಕೃತಿಗೆ ಮಧುರಚೆನ್ನ ದತ್ತಿ
ವನಮಾಲಾ ವಿಶ್ವನಾಥ ಅವರ ಕುವೆಂಪು ಬ್ರೈಡ್ ಇನ್‍ದಿ ಹಿಲ್ಸ್ ಕೃತಿಗೆ ಅಮೆರಿಕನ್ನಡ ದತ್ತಿ
ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಹರಿದಾಸರ ಮುಂಡಿಗೆಗಳು ಕೃತಿಗೆ ಜಲಜಾ ಶ್ರೀಪತಿ ಆಚಾರ್ಯ ಗಂಗೂರ ದತ್ತಿ,
ಎ.ಎಸ್.ಪುತ್ತಿಗೆ ಅವರ ವಾರ್ತಾಭಾರತಿ ಸಂಪಾದಕೀಯಕ್ಕೆ ಬಿ.ವಿ.ವೀರಭದ್ರಪ್ಪ ದತ್ತಿ
ಯು.ಸಿರಾಜ್ ಅಹ್ಮದ್ ಅವರ ನೆಲ ನುಡಿದ ನಾದ ಕೃತಿ ನಾಡೋಜ ಶಾಂತರಸ ಗಜಲ್ ಕಾವ್ಯ ದತ್ತಿ ಬಹುಮಾನಕ್ಕೆ ಆಯ್ಕೆಯಾಗಿದೆ. ಪುಸ್ತಕ ದತ್ತಿ ಬಹುಮಾನ 10 ಸಾವಿರ ರೂ. ನಗದು ಒಳಗೊಂಡಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement