ಬೆಂಗಳೂರು : ಅಜಿಂ ಪ್ರೇಮಜೀ ವಿಶ್ವ ವಿದ್ಯಾಲಯದಿಂದ ಭಾರತೀಯ ಸಾಂಸ್ಕೃತಿಕತೆ, ನಾಟ್ಯಶಾಸ್ತ್ರ ಹಾಗೂ ಯಕ್ಷಗಾನ ಈ ಕರಾವಳಿ ಪರಂಪರೆಯ ದೃಶ್ಯ ಕಾವ್ಯದ ಕುರಿತು ಮಾತು-ಸಂವಾದ ಕಾರ್ಯಕ್ರಮ ಬೆಂಗಳೂರಿನ ಕೋರಮಂಗಲದ ಇಂಡಿಯನ್ ಹೆರಿಟೇಜ್ ಅಕಾಡೆಮಿಯಲ್ಲಿ ಮೇ 8ರಂದು ಸಂಜೆ 6:30ರಿಂದ ನಡೆಯಲಿದೆ.
ದಶಕರೂಪಕಗಳ ದಶಾವತಾರಗಳು-ಯಕ್ಷಗಾನ ಸಂಶೋಧನಾ ಕೃತಿಯ ಲೇಖಕ ಹಾಗೂ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರು ಮಾತು-ಸಂವಾದ ನಡೆಸಿಕೊಡಲಿದ್ದಾರೆ. ಮೊದಲು ಈ ಬಗ್ಗೆ ಅಶೋಕ ಹಾಸ್ಯಗಾರ ಮಾತನಾಡಲಿದ್ದಾರೆ. ನಂತರ ಸಂವಾದ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಆದರೆ ನೋಂದಣಿ ಮಾಡುವುದು ಅಗತ್ಯ ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ