ಜೊಯಿಡಾ ; ಕರಡಿ ದಾಳಿಯಿಂದ ವೃದ್ಧನಿಗೆ ಗಂಭೀರ ಗಾಯ

ಕಾರವಾರ : ಮೇಯಲು ಬಿಟ್ಟಿದ್ದ ಎಮ್ಮೆಗಳನ್ನು ಕರೆದುಕೊಂಡು ವಾಪಸ್‌ ಬರುತ್ತಿದ್ದಾಗ ವೃದ್ಧನ ಮೇಲೆ ಕರಡಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕೋಳಗದ್ದದಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಗಾಯಗೊಂಡ ವೃದ್ಧನನ್ನು ಕೋಳಗದ್ದ ಗ್ರಾಮದ ನಿವಾಸಿ ವಿಠೋ ಪಾಟೀಲ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡಂಚಿನಲ್ಲಿ ಮೇಯಲು ಬಿಟ್ಟಿದ್ದ ಎಮ್ಮೆಗಳನ್ನು ವಾಪಸ್‌ ಕರೆತರುವಾಗ ಕರಡಿ ಏಕಾಏಕಿ ಅವರ ಮೇಲೆ ಎರಗಿದೆ ಎಂದು ಹೇಳಲಾಗಿದೆ.

ಕರಡಿ ಅವರ ಕಾಲಿಗೆ ಬಲವಾಗಿ ಕಚ್ಚಿ, ಮೈಗೆ ಉಗುರಿನಿಂದ ಪರಚಿದೆ. ಆಗ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಅವರು ಕಿರುಚಿಕೊಂಡಿದ್ದು ಕೇಳಿದ ಅಕ್ಕಪಕ್ಕದ ಜಮೀನಿನಲ್ಲಿದ್ದವರು ಸ್ಥಳಕ್ಕೆ ಧಾವಿಸಿದ್ದಾರೆ. ಜನರ ಗುಂಪು ಹಾಗೂ ವೃದ್ಧನ ಕೂಗಾಟದಿಂದ ಕಂಗಾಲಾದ ಕರಡಿ ಕಾಡಿನತ್ತ ಓಡಿಹೋಗಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ವಿಠೋ ಅವರನ್ನುಗ್ರಾಮಸ್ಥರು ತಕ್ಷಣವೇ ಜೋಯಿಡಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement