ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ (DK Shivakumar) ಅಧಿಕಾರ ಸ್ವೀಕರಿಸಿದ 3 ವಾರಗಳ ಬಳಿಕ ಇದೀಗ ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರವಾಹ ನಿರ್ವಹಣೆಗಾಗಿ ಅವರು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಪರಿಹಾರ ಕಾಮಗಾರಿಗಳಿಗೆ ಉಸ್ತುವಾರಿ ವಹಿಸಲು ಮುಖ್ಯಮಂತ್ರಿ ಶಿವಕುಮಾರ ಸಚಿವರಿಗೆ ವಿವಿಧ ಜಿಲ್ಲೆಗಳ ತುರ್ತು ಪ್ರಕೃತಿ ವಿಕೋಪ ಮೇಲುಸ್ತುವಾರಿಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಯಾವ ಸಚಿವರಿಗೆ ಯಾವ ಜಿಲ್ಲೆ?; ಇಲ್ಲಿದೆ ವಿವರ…
ಡಾ. ಜಿ. ಪರಮೇಶ್ವರ – ತುಮಕೂರು ಮತ್ತು ಚಿತ್ರದುರ್ಗ
ಕೆ.ಎಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
ರಾಮಲಿಂಗರೆಡ್ಡಿ – ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
ಎಂ.ಬಿ. ಪಾಟೀಲ – ವಿಜಯಪುರ ಮತ್ತು ಬಾಗಲಕೋಟೆ
ಕೆ.ಜೆ. ಜಾರ್ಜ್ – ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ
ಕೃಷ್ಣ ಬೈರೇಗೌಡ – ಬೆಂಗಳೂರು ನಗರ ಮತ್ತು ಹಾಸನ
ಈಶ್ವರ ಖಂಡ್ರೆ – ಬೀದರ್ ಮತ್ತು ಗದಗ್
ಸತೀಶ ಜಾರಕಿಹೊಳಿ – ಬೆಳಗಾವಿ, ಧಾರವಾಡ ಮತ್ತು ಹಾವೇರಿ
ಪ್ರಿಯಾಂಕ್ ಖರ್ಗೆ – ಕಲಬುರ್ಗಿ ಮತ್ತು ಯಾದಗಿರಿ
ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ – ರಾಯಚೂರು ಮತ್ತು ಕೊಪ್ಪಳ
ಯು.ಟಿ. ಖಾದರ್ – ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
ಬೈರತಿ ಸುರೇಶ – ಕೋಲಾರ ಮತ್ತು ಚಿಕ್ಕಬಳ್ಳಾಪುರ
ಡಾ. ಯತೀಂದ್ರ ಸಿದ್ದರಾಮಯ್ಯ – ಮೈಸೂರು ಮತ್ತು ಚಾಮರಾಜನಗರ

ಪ್ರಮುಖ ಸುದ್ದಿ :-   ಟ್ರಸ್ಟ್ ಹೆಸರಲ್ಲಿ ‘ಜಮೀನು ಲೂಟಿ’: ಖರ್ಗೆ ಕುಟುಂಬದ ವಿರುದ್ಧ ಬಿಜೆಪಿ ಗಂಭೀರ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement