ಕೇತನ ಅಗರ್ವಾಲ್ ಹತ್ಯೆ ಪ್ರಕರಣದ ಬಳಿಕ ಲೋಹಗಡ ಕೋಟೆಯತ್ತ ಜನರ ದಂಡು ; ಪ್ರವಾಸಿಗರ ಸಂಖ್ಯೆ ಶೇ.50 ಹೆಚ್ಚಳ

ಪುಣೆ: ಛತ್ರಪತಿ ಶಿವಾಜಿ ಮಹಾರಾಜರ ಜೊತೆ ನಿಕಟ ಸಂಬಂಧ ಹೊಂದಿರುವ ಹಾಗೂ ಯುನೆಸ್ಕೋ ಮಾನ್ಯತೆ ಪಡೆದಿರುವ ಐತಿಹಾಸಿಕ ಲೋಹಗಢ ಕೋಟೆ ಇದೀಗ ಮತ್ತೊಂದು ಕಾರಣಕ್ಕೆ ದೇಶದಾದ್ಯಂತ ಸುದ್ದಿಯಾಗಿದೆ. ಸಾಮಾನ್ಯವಾಗಿ 2–3 ಗಂಟೆಗಳ ಸುಲಭ ಟ್ರೆಕ್ಕಿಂಗ್ ಹಾಗೂ ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿರುವ ಈ ಕೋಟೆಗೆ ಈಗ ಕೇತನ ಅಗರ್ವಾಲ್ ಹತ್ಯೆ ನಡೆದ ಸ್ಥಳವನ್ನು ಕಣ್ಣಾರೆ ನೋಡಲು ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ಮಾಹಿತಿ ಪ್ರಕಾರ, ಕಳೆದ ವಾರ ಕೇತನ ಅಗರ್ವಾಲ್ ಅವರನ್ನು ಅವರ ಜೊತೆ ಮದುವೆ ನಿಶ್ಚಯವಾಗಿದ್ದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಕೇತನ ಅವರನ್ನು ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದರೆಂಬ ಆರೋಪ ಬಹಿರಂಗವಾದ ನಂತರ ಲೋಹಗಢ ಕೋಟೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಶೇ.50ರಷ್ಟು ಏರಿಕೆಯಾಗಿದೆ.

ಈ ಹಿಂದೆ ರಜಾದಿನಗಳಲ್ಲಿ ಸರಾಸರಿ 1000 ಮಂದಿ ಕೋಟೆಗೆ ಭೇಟಿ ನೀಡುತ್ತಿದ್ದರೆ, ಈಗ ಆ ಸಂಖ್ಯೆ ಸುಮಾರು 1,500ಕ್ಕೆ ಏರಿದೆಯಂತೆ. ವಾರದ ಸಾಮಾನ್ಯ ದಿನಗಳಲ್ಲಿ 400 ಮಂದಿ ಭೇಟಿ ನೀಡುತ್ತಿದ್ದರೆ, ಈಗ ಅದು 600ಕ್ಕೂ ಅಧಿಕವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದನ್ನು ಉಲ್ಲೇಖಿಸಿ ಎನ್‌ಡಿಟಿವಿ (NDTV) ವರದಿ ಮಾಡಿದೆ.
ಕೇತನ ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಅಪರಾಧ ನಡೆದ ಸ್ಥಳದ ಮರುಸೃಷ್ಟಿ (Crime Scene Recreation) ನಡೆಸಲು ಕೋಟೆಯನ್ನು ನಿಗದಿತ ಸಮಯಕ್ಕಿಂತ ಮೊದಲೇ ಮುಚ್ಚಿದ್ದರು. ಇದರಿಂದ ಒಳಗೆ ಪ್ರವೇಶಿಸಲು ಬಂದಿದ್ದ ಹಲವರು ನಿರಾಸೆಯಿಂದ ಹೊರಗೇ ಕಾಯುತ್ತಿದ್ದರು. ಕೋಟೆಯಿಂದ ಹೊರಬರುತ್ತಿದ್ದ ಕೆಲವರು ದೇಶಾದ್ಯಂತ ಗಮನ ಸೆಳೆದಿರುವ ಕೊಲೆ ಪ್ರಕರಣದ ಕಾರಣದಿಂದಾಗಿ ತಾವು ಬಂದಿದ್ದೇವೆ ಎಂದು ಹೇಳಿದ್ದರು ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಭಾರಿ ಆಘಾತ; ಶಿಂಧೆ ಬಣಕ್ಕೆ ಸೇರ್ಪಡೆಯಾದ ಪರಿಷತ್‌ ಸದಸ್ಯ ಸಚಿನ್ ಅಹಿರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement