ಗದಗ : 33 ದಿನಗಳ ಬಳಿಕ ಶಿವಯೋಗ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ

ಗದಗ : ಜಿಲ್ಲೆಯ ಅಂತೂರ-ಬೆಂತೂರ ಗ್ರಾಮದ ಬೂದೀಶ್ವರ ಮಠದ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಕೈಗೊಂಡಿದ್ದ 33 ದಿನಗಳ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನ ಭಾನುವಾರ ಮುಕ್ತಾಯವಾಯಿತು.
ಭಾನುವಾರ ಬೆಳಿಗ್ಗೆ ಕಲ್ಲಿನಿಂದ ನಿರ್ಮಿಸಿದ್ದ ಗರ್ಭಗುಡಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು.
ಜೂನ್ 3ರಂದು ಮುಂಜಾನೆ ಗರ್ಭಗುಡಿಯನ್ನು ಪ್ರವೇಶಿಸಿದ್ದ ರಾಚೋಟೇಶ್ವರ ಶ್ರೀಗಳು, ಕಲ್ಲಿನಿಂದ ನಿರ್ಮಿಸಲಾದ ವಿಶೇಷ ಗರ್ಭಗುಡಿಯಲ್ಲಿ 33 ದಿನಗಳ ಕಾಲ ಶಿವಲಿಂಗದ ಸನ್ನಿಧಿಯಲ್ಲಿ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನ ನಡೆಸಿದರು. ಆ 33 ದಿನಗಳ ಶಿವಯೋಗ ಸಮಾಧಿಯು ಭಾನುವಾರ ಅಂತ್ಯಗೊಂಡಿದ್ದು, ಸ್ವಾಮೀಜಿಯವರು ಸಮಾಧಿಯಿಂದ ಯಶಸ್ವಿಯಾಗಿ ಆಚೆ ಬಂದಿದ್ದಾರೆ. ಸಮಾಧಿಯಿಂದ ಹೊರಬಂದ ನಂತರ ಅಭ್ಯಂಗ (ಸ್ನಾನ) ಮುಗಿಸಿ, ಅಪಾರ ಭಕ್ತ ಸಮೂಹಕ್ಕೆ ರಾಚೂಟೇಶ್ವರ ಸ್ವಾಮೀಜಿಯವರು ದರ್ಶನ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರ ಆಗಮನ :
ಗದಗ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಯಾದಗಿರಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಅಂತೂರ-ಬೆಂತೂರ ಗ್ರಾಮಕ್ಕೆ ಆಗಮಿಸಿದ್ದರು. ಶ್ರೀಗಳ ಶಿವಯೋಗ ಸಮಾಧಿ ಅಂತ್ಯದ ಕ್ಷಣವನ್ನು ಕಣ್ತುಂಬಿಕೊಳ್ಳಲು ಬೆಳಗ್ಗಿನಿಂದಲೇ ಭಕ್ತರು ಮಠದ ಆವರಣದಲ್ಲಿ ನೆರೆದಿದ್ದರು. ಇಡೀ ಗ್ರಾಮ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.
ರಾಚೋಟೇಶ್ವರ ಶ್ರೀಗಳು, ಈ ಅನುಷ್ಠಾನವನ್ನು ಲೋಕ ಕಲ್ಯಾಣ, ಮಳೆ, ರೈತರ ಸಮೃದ್ಧಿ ಹಾಗೂ ಸಮಾಜದ ಶಾಂತಿಗಾಗಿ ಕೈಗೊಂಡಿದ್ದರು. ರಾಚೋಟೇಶ್ವರ ಶ್ರೀಗಳು ಈ ಹಿಂದೆಯೂ ಲೋಕ ಕಲ್ಯಾಣಕ್ಕಾಗಿ ಶಿವಯೋಗ ಸಮಾಧಿ ವ್ರತ ಕೈಗೊಂಡಿದ್ದರು.

ಪ್ರಮುಖ ಸುದ್ದಿ :-   ಉತ್ತರ ಕನ್ನಡ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ; ಪಿಎಸ್‌ಐ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement