ಅಮರಾವತಿ: ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಪ್ರೇಮಕಥೆಯೊಂದು ಎಂಟು ವರ್ಷಗಳ ಬಳಿಕ ದುರಂತ ಅಂತ್ಯ ಕಂಡ ಘಟನೆ ಆಂಧ್ರ ಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗುಂಟೂರು ಜಿಲ್ಲೆಯ ಕೊಂಡ್ರುಪಾಡು ಗ್ರಾಮದ 26 ವರ್ಷದ ಯುವತಿ ಇತ್ತೀಚೆಗೆ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಮುನ್ನ ಬರೆದಿದ್ದ ಕೊನೆಯ ಪತ್ರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಆತ್ಮಹತ್ಯೆ ಮಾಡಿಕೊಂಡ 24 ವರ್ಷದ ಯುವತಿಯ ಕುಟುಂಬಸ್ಥರು ಆಕೆಯ ಮೃತದೇಹವನ್ನು ಪ್ರಿಯಕರನ ಮನೆಗೆ ತಂದು, ಅಂತ್ಯಕ್ರಿಯೆಗೂ ಮುನ್ನ ಮರಣೋತ್ತರ ವಿವಾಹದ ರೀತಿ ಆತನಿಂದ ಮಂಗಳಸೂತ್ರ ಕಟ್ಟಿಸಬೇಕು ಎಂದು ಒತ್ತಾಯಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗುಂಟೂರು ಜಿಲ್ಲೆಯ ಅಡ್ಡಗಲ್ಲ ಯುವತಿ (24) ಮುಂಬೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಮುಂಬೈನಲ್ಲಿರುವ ತಮ್ಮ ಪಿಜಿ (ಪೇಯಿಂಗ್ ಗೆಸ್ಟ್) ವಸತಿ ಗೃಹದಲ್ಲಿ ಜುಲೈ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಕೆಯ ಆತ್ಮಹತ್ಯೆಗೆ ಪ್ರಿಯಕರ ಮದುವೆಗೆ ನಿರಾಕರಿಸಿದ್ದೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬದ ಮಾಹಿತಿ ಪ್ರಕಾರ, ಎಂಟು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪ್ರಕಾಶಂ ಜಿಲ್ಲೆಯ ಪೊಂಡೂರು ಗ್ರಾಮದ ಯುವಕನ ಜೊತೆ ಯುವತಿಗೆ ಪರಿಚಯವಾಗಿತ್ತು. ಆ ಪರಿಚಯ ನಂತರ ಪ್ರೀತಿಯಾಗಿ ಬೆಳೆದು ಹಲವು ವರ್ಷಗಳ ಕಾಲ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಇದರಿಂದ ಮನನೊಂದ ಯುವತಿ ಮುಂಬೈನಲ್ಲಿರುವ ತನ್ನ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಆಕೆಯ ಕೊನೆಯ ಇಚ್ಛೆಯಂತೆ ತನ್ನ ಅಂತ್ಯಸಂಸ್ಕಾರವನ್ನು ಪ್ರಿಯಕರನ ಊರಾದ ಪ್ರಕಾಶಂ ಜಿಲ್ಲೆಯ ಪೊಂಡೂರು ಗ್ರಾಮದಲ್ಲೇ ನಡೆಸಬೇಕು ಎಂಬುದಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂಬೈನಿಂದ ಮೃತದೇಹವನ್ನು ಪೊಂಡೂರಿಗೆ ತಂದು, ಅಂತ್ಯಕ್ರಿಯೆಗೆ ಮುನ್ನ ಆಕೆ ಪ್ರೀತಿಸಿದ ಯುವಕ ಮೃತದೇಹಕ್ಕೆ ಮಂಗಳಸೂತ್ರ ಕಟ್ಟಿ ಮರಣೋತ್ತರ ವಿವಾಹ ವಿಧಿಯನ್ನು ನೆರವೇರಿಸಬೇಕು ಎಂದು ಒತ್ತಾಯಿಸಿದರು.
ಆದರೆ, ಕತಾರ್‌ನಲ್ಲಿ ಉದ್ಯೋಗದಲ್ಲಿರುವ ಆತ ಅವರು ಮನೆಗೆ ಆಗಮಿಸಿದ ವೇಳೆ ಅಲ್ಲಿ ಇರಲಿಲ್ಲ. ಅಲ್ಲದೆ, ಆದರೆ ಯುವತಿಯ ಕುಟುಂಬ ಗ್ರಾಮಕ್ಕೆ ಬರುತ್ತಿರುವ ವಿಷಯವನ್ನು ಮುಂಚಿತವಾಗಿಯೇ ತಿಳಿದುಕೊಂಡಿದ್ದ ಪ್ರಿಯಕರನ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಸಂಬಂಧಿಕರು ಮನೆಯ ಗೇಟ್‌ನ ಬೀಗ ಒಡೆದು, ಮೃತದೇಹವನ್ನು ಮನೆಯ ಮುಂದೆ ಇಟ್ಟು ಧರಣಿ ನಡೆಸಿದರು. ಈ ಘಟನೆ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಮೃತ ಯುವತಿಯ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಯುವತಿಯ ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳು ಹಾಗೂ ಕುಟುಂಬ ಸದಸ್ಯರು ಮಾಡಿರುವ ಆರೋಪಗಳ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ