ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ : ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ, ಪ್ರಶಸ್ತಿ ಪಡೆದವರ ಪಟ್ಟಿ

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯು (Karnataka Nataka Academy) 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪಟ್ಟಿಯನ್ನು ಗುರುವಾರ (ಆಗಸ್ಟ್ 20) ಪ್ರಕಟಿಸಿದೆ.
ರಂಗಭೂಮಿ, ಕಲೆ, ಸಾಂಸ್ಕೃತಿಕ ಕ್ಷೇತ್ರ ಹಾಗೂ ನಾಟಕ ಚಟುವಟಿಕೆಗಳಿಗೆ ಹಲವು ವರ್ಷಗಳಿಂದ ಗಣನೀಯ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಕನ್ನಡ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಮನೆಮಾತಾಗಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಈ ಬಾರಿಯ ಪ್ರತಿಷ್ಠಿತ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ ಪ್ರಕಟಿಸಲಾಗಿದೆ. ಹಲವು ವರ್ಷಗಳಿಂದ ರಂಗಭೂಮಿ ಮತ್ತು ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಅಭಿನಯದ ಮೂಲಕ ಜನಮನದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಮುಖ್ಯಮಂತ್ರಿ ಚಂದ್ರು ಅವರ ಜೀವಮಾನದ ಸಮಗ್ರ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ((2026-27ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪಟ್ಟಿಯ ಪಿಡಿಎಫ್‌ ನೋಡಲು  Karnataka Nataka Academy Award 2026-27 ಇಲ್ಲಿ ಕ್ಲಿಕ್‌ ಮಾಡಿ)

ಪ್ರಮುಖ ಸುದ್ದಿ :-   ಭೂಸ್ವಾಧೀನಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ; ₹12.95 ಕೋಟಿ ಅಕ್ರಮ ಆಸ್ತಿ, 100 ಎಕರೆ ಕೃಷಿ ಭೂಮಿ ಪತ್ತೆ

25 ಸಾಧಕರಿಗೆ ವಾರ್ಷಿಕ ಪ್ರಶಸ್ತಿ  
ರಾಜ್ಯದ ವಿವಿಧ ಜಿಲ್ಲೆಗಳಿಂದ ರಂಗಭೂಮಿಗೆ ಗಣನೀಯ ಕೊಡುಗೆ ನೀಡಿದ 25 ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪಡೆದವರ ಹೆಸರು
ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ)
ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್, ಬಾಗಲಕೋಟೆ)
ಶಿವಾನಂದ ತಗಡೂರು (ಬೆಂಗಳೂರು)
ಆರ್. ರಾಮಕೃಷ್ಣ (ಚನ್ನಯ್ಯ) (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ)
ಅನಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ)
ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ)
ಫಜೀಯಮ್ಮ ಹೆಚ್.ಎಸ್. (ಸಾಗರ)
ಮಲ್ಲಪ್ಪ ಭರಮಪ್ಪ ಕುರಿ (ಕೊಪ್ಪಳ)
ಕೆ.ಬಿ. ಸ್ವಾಮಿ (ಮಂಡ್ಯ)

ಸುಶೀಲಾ ಹೆಗಡೆ ಮುರೂರು (ಸಿದ್ಧಾಪುರ, ಉತ್ತರ ಕನ್ನಡ)
ರಾಜಕುಮಾರ ಎಸ್. (ಬೆಂಗಳೂರು ನಗರ)
ಡಾ. ಎಂ. ಗಣೇಶ ಹೆಗ್ಗೋಡು (ಸಾಗರ, ಶಿವಮೊಗ್ಗ ಜಿಲ್ಲೆ)
ಪ್ರದೀಪಚಂದ್ರ ಕುತ್ಪಾಡಿ (ಉಡುಪಿ)
ಎನ್.ಟಿ. ಕೃಷ್ಣಪ್ಪ (ಬೆಂಗಳೂರು ನಗರ)
ಪುರುಷೋತ್ತಮ ಹಂಡ್ಯಾಳ್ (ಬಳ್ಳಾರಿ)
ಡಾ. ಎಸ್.ವಿ. ಸುಷ್ಮಾ (ಬೆಂಗಳೂರು ನಗರ)
ನಂದಾ ಹಳೆಮನೆ (ಮೈಸೂರು)
ಶ್ರೀನಿವಾಸ (ರಾಮನಗರ)
ವೈ.ಎನ್. ಉಮಾ (ಯಲಹಂಕ, ಬೆಂಗಳೂರು ನಗರ)
ಗದಿಗೆಯ್ಯ ಬಿ. ಹಿರೇಮಠ (ಬೈಲಹೊಂಗಲ, ಬೆಳಗಾವಿ ಜಿಲ್ಲೆ)
ಜಿ. ಭಾರತಿ (ಕೂಡ್ಲಿಗಿ, ವಿಜಯನಗರ ಜಿಲ್ಲೆ)
ಬಿ. ಸಾವಿತ್ರಮ್ಮ (ದಾವಣಗೆರೆ )
ಎಂ.ಸಿ. ಶಿವರುದ್ರಪ್ಪ (ತುಮಕೂರು)
ವೇಣುಗೋಪಾಲ ಕೆ. (ಬೆಂಗಳೂರು ನಗರ)
ಎನ್.ಎಂ. ಲಕ್ಷ್ಮಯ್ಯ (ಮಾಲೂರು, ಕೋಲಾರ)

ಪ್ರಮುಖ ಸುದ್ದಿ :-   ಪಶ್ಚಿಮ ಘಟ್ಟದ 1449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ : ಕೇಂದ್ರದ ಕರಡು ಅಧಿಸೂಚನೆ ತಿರಸ್ಕರಿಸಲು ಕರ್ನಾಟಕ ನಿರ್ಧಾರ

ದತ್ತಿ ಪುರಸ್ಕಾರ ಪುರಸ್ಕೃತರ ಪಟ್ಟಿ
ಎಸ್. ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ: ಬಿ.ಜಿ. ಶ್ರೀಧರ (ಬೆಂಗಳೂರು ನಗರ)
ಇ. ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ: ಅಶ್ಫಾಕ್ ಹುಸೇನ್ ಹಾ. ಜಾಗೀರದಾರ್ (ವಿಜಯಪುರ)
ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಡಾ. ಎಂ. ಚಂದ್ರಪ್ಪ (ಟಿ. ನರಸೀಪುರ, ಮೈಸೂರು)
ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ದಯಾನಂದ ಚ ಬೆಳಗಿ (ಗದಗ)
ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ಗಂಗಾಧರ ರೆಡ್ಡಿ ಬಿ.ಆರ್. (ಕುಣಿಗಲ್, ತುಮಕೂರು)
ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ವೈ. ಎನ್. ಶಿವಣ್ಣ (ತುಮಕೂರು)
ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ: ಚಂದ್ರಮ್ಮ (ಸಾಣೇಹಳ್ಳಿ, ಚಿತ್ರದುರ್ಗ)

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement