ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ನವದೆಹಲಿ: ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ 19 ಕೆ.ಜಿ ತೂಕದ ವಾಣಿಜ್ಯ (ಕಮರ್ಷಿಯಲ್) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇಂಡಿಯನ್ ಆಯಿಲ್ (IndianOil) ನೀಡಿರುವ ದರ ಪಟ್ಟಿಯ ಪ್ರಕಾರ, ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆಯು 62.50 ರೂ.ಗಳಷ್ಟು  ಹೆಚ್ಚಾಗಿ ಪ್ರತಿ ಸಿಲಿಂಡರ್‌ ಬೆಲೆ 2,810 ರೂ.ಗಳಿಗೆ ತಲುಪಿದೆ.
ಮುಂಬೈ: 63 ರೂ.  ಹೆಚ್ಚಳವಾಗಿದ್ದು, ಬೆಲೆಯು  2,701 ರಿಂದ  2,764 ರೂ.ಗಳಿಗೆ ಏರಿದೆ.
ಚೆನ್ನೈ: 66.50 ರೂ. ಹೆಚ್ಚಳವಾಗಿದ್ದು,  ಪ್ರತಿ ಸಿಲಿಂಡರ್‌ ಬೆಲೆ 2,916.50 ರಿಂದ  2,983 ರೂ.ಗಳಿಗೆ ತಲುಪಿದೆ.
ಪಾಟ್ನಾ:  ನಗರಗಳ ಪೈಕಿ ಅತ್ಯಧಿಕ ಏರಿಕೆ ಕಂಡಿರುವ ಇಲ್ಲಿ, ಸಿಲಿಂಡರ್ ಬೆಲೆಯು 71.50 ರೂ.ಏರಿಕೆಯಾಗಿದೆ. ಪ್ರತಿ ಸಿಲಿಂಡರ್‌ ಬೆಲೆ 3,100.50 ರೂ.ಗಳಿಗೆ ತಲುಪಿದೆ.
ಉಲ್ಲೇಖಿತ ನಗರಗಳಲ್ಲಿ 14.2 ಕೆ.ಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಅಂತಾರಾಷ್ಟ್ರೀಯ ಎಲ್‌ಪಿಜಿ ಮಾನದಂಡಗಳು (Benchmarks) ಮತ್ತು ವಿದೇಶಿ ವಿನಿಮಯ ದರಗಳ (Currency movements) ಚಲನೆಯು ಎಲ್‌ಪಿಜಿ ಬೆಲೆ ನಿಗದಿಯ ಮೇಲೆ ಪ್ರಭಾವ ಬೀರುತ್ತವೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರುವ ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಸೆಲ್ (PPAC) ಭಾರತದಲ್ಲಿ ಪೆಟ್ರೋಲಿಯಂ ಬೆಲೆಗಳು ಮತ್ತು ಎಲ್‌ಪಿಜಿಗೆ ಸಂಬಂಧಿಸಿದ ಡೇಟಾವನ್ನು ನಿರ್ವಹಿಸುತ್ತದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement