ಕಾರವಾರ :ಕರ್ನಾಟಕದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಳಿಕ ಮಂಗಳವಾರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿ 4,55,00,011 ಮತದಾರರಿದ್ದಾರೆ. 99,32,303 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ ಮಂಗಳವಾರ ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಬಳಿಕಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರಿದ್ದು, ಇವರಲ್ಲಿ 5,70,006 ಪುರುಷರು, 5,69,614 ಮಹಿಳೆಯರು ಹಾಗೂ 3 ಇತರೆ (ತೃತೀಯ ಲಿಂಗಿ) ಮತದಾರರು ಸೇರಿದ್ದಾರೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿನ 1153 ಮತಗಟ್ಟೆಗಳಲ್ಲಿ ಅಂತಿಮವಾಗಿ ಒಟ್ಟು 11,39,623 ಮತದಾರರಿದ್ದಾರೆ.
18-19 ವಯೋಮಾನದ ಒಟ್ಟು 17569 ಮತದಾರರಿದ್ದು, ಇದರಲ್ಲಿ 8935 ಯುವಕ ಮತ್ತು 8634 ಯುವತಿಯರಿದ್ದಾರೆ. ಒಟ್ಟು 15561 ವಿಕಲಚೇತನ ಮತದಾರರಲ್ಲಿ 9272 ಪುರುಷರು ಮತ್ತು 6289 ಮಹಿಳೆಯರಿದ್ದಾರೆ. 85 ವರ್ಷ ಮೇಲ್ಪಟ್ಟ 9540 ಮತದಾರರಲ್ಲಿ 3816 ಪುರುಷರು ಮತ್ತು 5724 ಮಹಿಳೆಯರಿದ್ದಾರೆ. ಎನ್.ಆರ್.ಐ ಮತದಾರರಲ್ಲಿ ಒಬ್ಬ ಪುರುಷ ಮತ್ತು ಒಬ್ಬರು ಮಹಿಳೆ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ.
ಹಳಿಯಾಳ ವಿಧಾನಸಭಾ ಮತಕ್ಷೇತ್ರದಲ್ಲಿ 460 ಮತಗಟ್ಟೆಗಳ ವ್ಯಾಪ್ತಿಯಲ್ಲಿ , 85606 ಪುರುಷ, 84760 ಮಹಿಳೆ ಹಾಗೂ 1 ಇತರೆ ಸೇರಿ ಒಟ್ಟು 1,70,367 ಮತದಾರರಿದ್ದಾರೆ. ಕಾರವಾರ ವಿಧಾನಸಭಾ ಮತಕ್ಷೇತ್ರದಲ್ಲಿ 229 ಮತಗಟ್ಟೆಗಳ ವ್ಯಾಪ್ತಿಯಲ್ಲಿ , 98736 ಪುರುಷ, 1,02,733 ಮಹಿಳೆ ಸೇರಿ ಒಟ್ಟು 2,01,469 ಮತದಾರರಿದ್ದಾರೆ. ಕುಮಟಾ ವಿಧಾನಸಭಾ ಮತಕ್ಷೇತ್ರದಲ್ಲಿ 137 ಮತಗಟ್ಟೆಗಳ ವ್ಯಾಪ್ತಿಯಲ್ಲಿ , 89203 ಪುರುಷ, 89909 ಮಹಿಳೆ ಹಾಗೂ 2 ಇತರೆ ಸೇರಿ ಒಟ್ಟು 1,79,114 ಮತದಾರರಿದ್ದಾರೆ. ಭಟ್ಕಳ ವಿಧಾನಸಭಾ ಮತಕ್ಷೇತ್ರದಲ್ಲಿ 80 ಮತಗಟ್ಟೆಗಳ ವ್ಯಾಪ್ತಿಯಲ್ಲಿ , 1,10,492 ಪುರುಷ, 1,07,511 ಮಹಿಳೆ ಸೇರಿ ಒಟ್ಟು 2,18,003 ಮತದಾರರಿದ್ದಾರೆ. ಶಿರಸಿ ವಿಧಾನಸಭಾ ಮತಕ್ಷೇತ್ರದಲ್ಲಿ 129 ಮತಗಟ್ಟೆಗಳ ವ್ಯಾಪ್ತಿಯಲ್ಲಿ , 97,253 ಪುರುಷ, 97,791 ಮಹಿಳೆ ಸೇರಿ ಒಟ್ಟು 1,95,044 ಮತದಾರರಿದ್ದಾರೆ. ಯಲ್ಲಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ 118 ಮತಗಟ್ಟೆಗಳ ವ್ಯಾಪ್ತಿಯಲ್ಲಿ , 88716 ಪುರುಷ, 86910 ಮಹಿಳೆ ಸೇರಿ ಒಟ್ಟು 1,75,626 ಮತದಾರರಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ಜಿಲ್ಲೆಯಲ್ಲಿ 65248 ಮಂದಿಗೆ ನೋಟೀಸ್ ಗಳನ್ನು ನೀಡಿ ವಿಚಾರಣೆ ನಡೆಸಲಾಗಿತ್ತು. ಇದರಲ್ಲಿ 64,673 ಮಂದಿಯನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಮೃತ 2667 ಮತದಾರರು ಮತ್ತು ದ್ವಿಪ್ರತಿಯ 15361 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ