ನವ ದೆಹಲಿ: ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 9 ರಿಂದ ಪಂದ್ಯ ಆರಂಭಗೊಳ್ಳಲಿದೆ.
ಒಟ್ಟು ೬೦ ಪಂದ್ಯಗಳನ್ನೊಳಗೊಂಡ ಈ ಐಪಿಎಲ್ ಪಂದ್ಯಾವಳಿಯು ಏ.೯ರಿಂದ ಆರಂಭವಾಗಲಿದ್ದು, ಅಂತಿಮ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಪಂದ್ಯಾವಳಿಯು ಏಪ್ರಿಲ್ 9 ರಿಂದ ಮೇ 30ರ ವರೆಗೆ ಒಟ್ಟು ೫೨ ದಿನಗಳ ಕಾಲ ನಡೆಯಲಿದೆ.ಮುಂಬೈ, ಅಹಮದಾಬಾದ್, ಚೆನ್ನೈ, ಬೆಂಗಳೂರು, ನವ ದೆಹಲಿ, ಕೋಲ್ಕತ್ತಾ ನಗರಗಳಲ್ಲಿ ಪಂದ್ಯ ನಡೆಯಲಿದ್ದು, ಏ.೯ರಂದು ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದರೆ, ಮೇ 30 ರಂದು ಫೈನಲ್ ಹಣಾಹಣಿ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.ಕಳೆದ ವರ್ಷ ಕೋವಿಡ್ ನಿಂದಾಗಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ಐಪಿಎಲ್ ಟೂರ್ನಿ ನಡೆದಿತ್ತು. ಅದರಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿತ್ತು.ಈ ವರ್ಷ ಭಾರತದಲ್ಲಿಯೇ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ