
ಬೆಂಗಳೂರು: ಎರಡು ದಿನಗಳ ಹಿಂದೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದ ಆರೋಪದಡಿ ವಕೀಲ ಜಗದೀಶ್ ಅವರನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರವಿವಾರ ರಜೆ ಕಾರಣ ನ್ಯಾಯಾಧೀಶರ ನಿವಾಸದಲ್ಲೇ ಆರೋಪಿಯನ್ನು ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಶನಿವಾರ ಪ್ರಕರಣವೊಂದರ ಸಂಬಂಧ ಜಗದೀಶ್ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಲಯಕ್ಕೆ ಆಗಮಸಿದ್ದರು, ಈ ವೇಳೆಯಲ್ಲಿ ಕೋರ್ಟ್ ಅಂಗಳದಲ್ಲಿ ಗಲಾಟೆಯಾಗಿತ್ತು, ಈ ಗಲಾಟೆಗೆ ಸಂಬಂಧಪಟ್ಟಂತೆ ವಕೀಲ ಜಗದೀಶ್ ತಮ್ಮ ಫೇಸ್‌ಬುಕ್ ನಲ್ಲಿ ಕೆಲವರ ಬಗ್ಗೆ ಆರೋಪಿಸಿದ್ದರು, ಇದೇ ವೇಳೆ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದ ನಿಯೋಗವು ಪೊಲೀಸ್ ಕಮೀಷನರ್ ಕಮಲ್ ಪಂತ್ಗೆ ಶನಿವಾರ ದೂರು ನೀಡಿತ್ತು. ಇದರ ಅನ್ವಯ ವಕೀಲ ಜಗದೀಶ್ ಅವರನ್ನು ಬಂಧಿಸಿದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ