ಆಗಸ್ಟ್‌ 6ರಿಂದ ಹುಬ್ಬಳ್ಳಿ-ರಾಮೇಶ್ವರಂ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಆರಂಭ

ಬೆಂಗಳೂರು: ಉತ್ತರ ಕರ್ನಾಟಕದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ, ನೈರುತ್ಯ ರೈಲ್ವೆ ಇಲಾಖೆಯಿಂದ ಹುಬ್ಬಳ್ಳಿ –ರಾಮೇಶ್ವರಂ – ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸಲಾಗುತ್ತಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯು ಮಾಹಿತಿ ನೀಡಿದ್ದು, ರೈಲು ಸಂಖ್ಯೆ 07355/07356 ಹುಬ್ಬಳ್ಳಿ –ರಾಮೇಶ್ವರಂ –ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು 08 ಟ್ರಿಪ್ ಓಡಿಸಲು ನಿರ್ಧರಿಸಿದೆ ಎಂದು ಹೇಳಿದೆ.
ಹುಬ್ಬಳ್ಳಿ –ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್‌ 6 ರಿಂದ ಸೆಪ್ಟೆಂಬರ್ 24ರ ವರೆಗೆ ಹುಬ್ಬಳ್ಳಿಯಿಂದ ಪ್ರತಿ ಶನಿವಾರ ಬೆಳಿಗ್ಗೆ 6:30 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 06:15 ಗಂಟೆಗೆ ರಾಮೇಶ್ವರಂ ತಲುಪಲಿದೆ.

ರೈಲು ಸಂಖ್ಯೆ 07356 ರಾಮೇಶ್ವರಂ- ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್‌ 7 ರಿಂದ ಸೆಪ್ಟೆಂಬರ್ 25ರ ವರೆಗೆ ರಾಮೇಶ್ವರದಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಹೊರಡಲಿದ್ದು ಹುಬ್ಬಳ್ಳಿ ನಿಲ್ದಾಣವನ್ನು ಮರುದಿನ ರಾತ್ರಿ 7:25 ಗಂಟೆಗೆ ತಲುಪಲಿದೆ.
ಈ ರೈಲಿಗೆ ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ ಜಂಕ್ಷನ್‌., ಪುದುಕ್ಕೋಟ್ಟೈ, ಕಾರೈಕ್ಕುಡಿ ಜಂ., ಮಾನಾಮದುರೈ ಜಂಕ್ಷನ್‌ ಮತ್ತು ರಾಮನಾಥಪುರಂಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲಿನ ಸಂಯೋಜನೆಯು ಒಂದು ಹವಾನಿಯಂತ್ರಿತ 2-ಟೈರ್ ಕೋಚ್, ಮೂರು ಹವಾನಿಯಂತ್ರಿತ 3-ಟೈರ್ ಕೋಚ್ ಗಳು, ಒಂಬತ್ತು ಸ್ಲೀಪರ್ ಕೋಚ್ ಗಳು, ಐದು ದ್ವಿತೀಯ ದರ್ಜೆಯ ಕೋಚ್ ಗಳು ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟ್ ಗಳಿಂದ ಕೂಡಿದ ಲಗೇಜ್-ಕಮ್-ಬ್ರೇಕ್ ವ್ಯಾನ್ ಗಳನ್ನು ಹೊಂದಿರಲಿದೆ.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement