ಧನುಷ್‌-ನಯನತಾರಾ ಜಗಳ ತಾರಕಕ್ಕೆ; ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ಧನುಷ್‌

ಚೆನ್ನೈ: ತಮಿಳು ನಟ ಧನುಷ್‌ ಮತ್ತು ನಟಿ ನಯನತಾರಾ ನಡುವಿನ ಬಿಕ್ಕಟ್ಟು (Dhanush v/s Nayanthara) ಈಗ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ.
ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ(Nayanthara: Beyond The Fairy Tale)ದಲ್ಲಿ ಅನುಮತಿಯನ್ನು ಪಡೆಯದೆ ತಮ್ಮ ನಿರ್ಮಾಣದ ನಾನು ರೌಡಿ ಧಾನ್‌ ಸಿನಿಮಾದ ದೃಶ್ಯಗಳನ್ನು ಬಳಸಿದ್ದಾರೆಂದು ಆರೋಪಿಸಿ ನಟ ಧನುಷ್ ಅವರು ನಯನತಾರಾ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ನಯನತಾರಾ ಮತ್ತು ಅವರ ಪತಿ, ಚಲನಚಿತ್ರ ನಿರ್ಮಾಪಕ ವಿಘ್ನೇಶ ಶಿವನ್ ವಿರುದ್ಧ ಧನುಷ್ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.
ಧನುಷ್ ಅವರ ವಂಡರ್ ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಯನತಾರಾ, ವಿಘ್ನೇಶ ಮತ್ತು ಅವರ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮೊಕದ್ದಮೆ ಹೂಡಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿರುವ ನಯನತಾರಾ: ಬಿಯಾಂಡ್ ದ ಫೇರಿಟೇಲ್‌ನಲ್ಲಿ ಅವರು ನಾನಮ್ ರೌಡಿ ಧಾನ್‌ನ ಕೆಲವು ದೃಶ್ಯಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಕಂಟೆಂಟ್ ಹೂಡಿಕೆಗಳನ್ನು ವರದಿ ಮಾಡುವ ಸಂಸ್ಥೆಯಾದ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಎಲ್‌ಎಲ್‌ಪಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಕೋರಿ ಧನುಷ್ ಸಲ್ಲಿಸಿರುವ ಅರ್ಜಿಯನ್ನೂ ಹೈಕೋರ್ಟ್‌ ಪರಿಗಣನೆಗೆ ತೆಗೆದುಕೊಂಡಿದೆ.
ನವೆಂಬರ್ 27 ರಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ನ್ಯಾಯಮೂರ್ತಿ ಅಬ್ದುಲ್ ಕ್ವಿದ್ಧೋಸ್ ಅವರು ನಯನತಾರಾ, ವಿಘ್ನೇಶ ಶಿವನ್ ಮತ್ತು ಇತರರ ವಿರುದ್ಧದ ಆರೋಪಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ 23 ಕೋವಿಡ್-19 ಪ್ರಕರಣಗಳು ವರದಿ; ಹೆದರುವ ಅಗತ್ಯ ಇಲ್ಲ ; ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ

ಏನಿದು ವಿವಾದ?
ನಯನತಾರಾ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರ ʼನಯನತಾರಾ: ಬಿಯಾಂಡ್‌ ದಿ ಫೇರ್‌ ಟೇಲ್‌ʼ ನ ಟ್ರೈಲರ್‌ ಇತ್ತೀಚೆಗೆ ರಿಲೀಸ್‌ ಆಗಿತ್ತು. ಇದರಲ್ಲಿ ನಯನತಾರಾ ಮತ್ತು ವಿಜಯ ಸೇತುಪತಿ ನಟಿಸಿದ, ಧನುಷ್‌ ನಿರ್ಮಿಸಿದ ʼನಾನುಂ ರೌಡಿ ದಾನ್‌ʼ ಸಿನಿಮಾದ 3 ಸೆಕೆಂಡ್‌ಗಳ ಬಿಟಿಎಸ್‌ (Behind-the-scenes) ಕಂಡು ಬಂದಿದೆ. ಅನುಮತಿ ಪಡೆಯದೆ ಇದನ್ನು ಬಳಸಲಾಗಿದೆ ಎಂದು ಇದರ ವಿರುದ್ಧ ಲೀಗಲ್‌ ನೋಟಿಸ್‌ ಕಳುಹಿಸಿದ್ದ ಧನುಷ್‌ 10 ಕೋಟಿ ರೂ. ಪರಿಹಾರ ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ನಯನತಾರಾ ಮತ್ತು ವಿಘ್ನೇಶ ಶಿವನ್ ಅವರ ಸಾಕ್ಷ್ಯಚಿತ್ರ, Nayanthara: Beyond The Fairytale, ನವೆಂಬರ್ 18 ರಂದು ಅವರ ಜನ್ಮದಿನದಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಬಿಡುಗಡೆಯ ಮೊದಲು, ನಯನತಾರಾ ಧನುಷ್‌ಗೆ ಕಟುವಾದ ಪತ್ರ ಬರೆದಿದ್ದರು.

“2015ರ ‘ನಾನುಮ್‌ ರೌಡಿ ದಾನ್‌ʼ ಚಲನಚಿತ್ರದ ದೃಶ್ಯಗಳನ್ನು ಬಳಕೆ ಮಾಡಲು ಧನುಷ್‌ ಅವರಲ್ಲಿ ಅನುಮತಿ ಕೇಳಿದ್ದೆ. ಹಲವು ವರ್ಷಗಳ ಪ್ರಯತ್ನಗಳು ವಿಫಲವಾದವು. ಧನುಷ್‌ ಅನುಮತಿ ನಿರಾಕರಿಸಿದ್ದರಿಂದ ಸಾಕ್ಷ್ಯಚಿತ್ರವನ್ನು ಮರು ಚಿತ್ರೀಕರಿಸಬೇಕಾಯಿತು. 2 ವರ್ಷಗಳಿಂದ ಧನುಷ್‌ಗೆ ಹಲವು ಬಾರಿ ಮನವಿ ಮಾಡಿದ್ದೆ ಎಂದು ನಯನತಾರಾ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ. ನಂತರ ಅವರು ಬಳಕೆಗೆ NOC (ನಿರಾಕ್ಷೇಪಣೆ ಪ್ರಮಾಣಪತ್ರ) ನೀಡುವುದನ್ನು ನಿರಾಕರಿಸಿದರು.
“ಅಭಿಮಾನಿಗಳು ನೋಡಿದ ಧನುಷ ಬೇರೆ, ಅಸಲಿ ಧನುಷ್‌ ಬೇರೆ. ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಸಾರ್ವಜನಿಕವಾಗಿ ಅತ್ಯಂತ ಸಾಧಾರಣ ಹಾಗೂ ವಿಶಾಲ ಮನಸ್ಥಿತಿಯ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಧನುಷ್‌ ಅವರಲ್ಲಿ ಅರ್ಧ ಭಾಗದಷ್ಟಾದರೂ ವಿಶಾಲತೆ ಇಲ್ಲ ಎನ್ನುವುದು ಅರಿವಾಗಿದೆ. ಸಿನಿಮಾ ಕ್ಷೇತ್ರದ ಯಾವುದೇ ಹಿನ್ನೆಲೆಯಿಲ್ಲದೆ, ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅಭಿಮಾನಿಗಳ ಬೆಂಬಲದಿಂದ ಈ ಹಂತಕ್ಕೆ ತಲುಪಿದ್ದೇನೆ. ಲೀಗಲ್‌ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುವೆ” ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement