ಮಹತ್ವದ ಸೂಚನೆ.. ಕರ್ನಾಟಕದಲ್ಲಿ ಲಾಕ್‌ಡೌನ್‌ ವೇಳೆ ಕೂಲಿ ಕಾರ್ಮಿಕರು, ವಲಸಿಗರಿಗೆ ಇಂದಿರಾ ಕ್ಯಾಂಟೀನ್’ನಲ್ಲಿ ಉಟಿತ ಊಟ

ಬೆಂಗಳೂರು :ಕರ್ನಾಟಕದಲ್ಲಿ ಮೇ 10 ರಿಂದ 24ರ ವರೆಗೆ ಕೋವಿಡ್‌ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಕೂಲಿ ಕಾರ್ಮಿಕರು, ವಲಸಿಗರು ಮತ್ತು ದುರ್ಬಲ ವರ್ಗದವರಿಗೆ ಅನನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಧೆಗಳಲ್ಲಿ ಚಾಲನೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವಂತೆ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ.
ರಾಜ್ಯ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪತ್ರ ಬರೆದಿದ್ದು, ಸರ್ಕಾರವು ಕೋವಿಡ್-19 ವೈರಸ್‌ ಹರಡುವುದನ್ನು ತಪ್ಪಿಸಲು ಈ ಪ್ರಸರಣ ಸರಪಳಿ ತುಂಡರಿಸಲು ರಾಜ್ಯದಲ್ಲಿ ಮೇ 10ರಿಂದ ಮೇ 24ರ ವರೆಗೆ ಕೋವಿಡ್ 19 ಲಾಕ್‌ಡೌನ್‌ ಜಾರಿ ಮಾಡಿ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿದೆ.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಮತ್ತು ದುರ್ಬಲ ವರ್ಗದವರಿಗೆ ಅನನುಕೂಲವಾಗುವುದನ್ನು ತಪ್ಪಿಸಲು ನಗರ ಸ್ಥಳೀಯ ಸಂಸ್ಥೆಗಳ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಊಟ ಹಾಗೂ ಅಪಾಹಾರ ನೀಡುವಂತೆ ಸೂಚಿಸಲಾಗಿದೆ.
ಹೀಗಾಗಿ 10-05-2021 ರಿಂದ 24-05-2021ರ ವರೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ (ಬಿಬಿಎಂಪಿ ಹೊರತುಪಡಿಸಿ) ಇಂದಿರಾ ಕ್ಯಾಟೀನ್ ಗಳಲ್ಲಿ ಪ್ರಚಲಿತ ಮಾರ್ಗಸೂಚಿಗಳನ್ವಯ ಉಚಿತವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಆಹಾರ ಸೇವಿಸುವ ಜನರ ಸಂಖ್ಯೆ ವಿವರಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು ಹಾಗೂ ಯೋಜನಾ ನಿರ್ದೇಶಕರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಪರಿವೀಕ್ಷಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement