ಪಹಲ್ಗಾಮ್ ಭಯೋತ್ಪಾದಕ ದಾಳಿ : ಹೊರಹೊಮ್ಮಿದ ಕಿರುಚಾಟ-ಗುಂಡಿನ ಸದ್ದಿನ ಭಯೋತ್ಪಾದಕರ ದಾಳಿಯ ಕ್ಷಣದ ವೀಡಿಯೊಗಳು

ಶ್ರೀನಗರ : ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾದ ದಿ ರೆಸಿಸ್ಟೆನ್ಸ್​ ಫ್ರಂಟ್​ಗೆ ಸೇರಿದ ಭಯೋತ್ಪಾದಕರು ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಮಂಗಳವಾರ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಘಟನೆಯಲ್ಲಿ 28 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಹಲ್ಗಾಮ್ ಎಂಬ ರೆಸಾರ್ಟ್ ಪಟ್ಟಣದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಜನಪ್ರಿಯ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ನಿಖರವಾದ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನಲ್ಲಿ ವ್ಯಕ್ತಿಯೊಬ್ಬರು ವೀಡಿಯೊ ಮಾಡುತ್ತಿದ್ದಾಗ ಆ ಸ್ಥಳದಲ್ಲಿ ದೂರದಲ್ಲಿ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ನಡೆಸಿದ ದಾಳಿ ಅದರಲ್ಲಿ ಸೆರೆಯಾಗಿದೆ. ದೃಷ್ಯ ಸ್ಪಷ್ಟವಾಗಿಲ್ಲದಿದ್ದರೂ ಅಲ್ಲಿ ನಡೆಯುತ್ತಿರುವ ಘಟನೆ, ಭಯ ಹೇಗಿತ್ತು ಎಂಬುದನ್ನು ಇದು ಸಾಕ್ಷೀಕರಿಸುತ್ತದೆ. ಜನರು ಅದರಲ್ಲಿ ಗಾಬಿರಯಿಂದ ಓಡಾಡುವುದ, ಕೂಗುವುದು, ಕಿರುಚುವುದು ಕೇಳಿಬರುತ್ತದೆ.

ಅಲ್ಲದೆ, ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿರುವ ವೀಡಿಯೊವೊಂದು ಸಹ ಬಹಿರಂಗವಾಗಿದೆ. ಈ ವೀಡಿಯೊದ ಹಿನ್ನೆಲೆಯಲ್ಲಿ ಗುಂಡೇಟಿನ ಶಬ್ದಗಳು ಮತ್ತು ಜನರು ಕಿರುಚುತ್ತಿರುವ ಶಬ್ದ ಕೇಳಿಬರುತ್ತವೆ.
ವೀಡಿಯೊದಲ್ಲಿ, ಆ ವ್ಯಕ್ತಿಯೊಬ್ಬರು ಅವರಿದ್ದ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ದಾಳಿಯಿಂದ ತಾನು ಬದುಕುಳಿದಿದ್ದೇನೆ ಎಂದು ಹೇಳಿದ್ದಾರೆ. ವೀಡಿಯೊ ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ಅದೇ ವ್ಯಕ್ತಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಮತ್ತು ಭಯೋತ್ಪಾದಕ ದಾಳಿ ನಡೆದಿದೆ ಎಂದು ಹೇಳುವುದನ್ನು ಕಾಣಬಹುದು. ಆ ವ್ಯಕ್ತಿ ವೀಡಿಯೊದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿರುವುದಾಗಿ ಮತ್ತು ತನ್ನ ಜೀವವನ್ನು ಉಳಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳಿರುವುದಾಗಿ, ಇತರರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿದ್ದಾನೆ.

ನಂತರ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬದುಕುಳಿದ ವ್ಯಕ್ತಿ ದಾಳಿಯ ಸಮಯದಲ್ಲಿ ಭಯ ತನ್ನನ್ನು ಆವರಿಸಿಕೊಂಡಿದೆ ಎಂದು ಹಂಚಿಕೊಂಡರು. ಆರಂಭದಲ್ಲಿ ಗುಂಡಿನ ಶಬ್ದವನ್ನು ಪಟಾಕಿ ಎಂದು ತಪ್ಪಾಗಿ ಭಾವಿಸಲಾಗಿತ್ತು.
“ಎರಡು ಮೂರು ಸುತ್ತುಗಳ ಶಬ್ದ ಕೇಳಿದಾಗ ಅದು ಪಟಾಕಿ ಎಂದು ನಾವು ಭಾವಿಸಿದ್ದೆವು. ಜನರ ಕಿರುಚಾಟ ಕೇಳಿದಾಗ, ನಾವು ನಮ್ಮ ಪ್ರಾಣಕ್ಕಾಗಿ ಓಡಿದೆವು” ಎಂದು ಇಂಡಿಯಾ ಟುಡೇ ಅವರು ಹೇಳಿದ್ದನ್ನು ಉಲ್ಲೇಖಿಸಿದೆ.
“ಇಂತಹ ದಾಳಿ ಅಲ್ಲಿ ಎಂದಿಗೂ ನಡೆದಿಲ್ಲ. ಇಂತಹ ದಾಳಿ ಅಲ್ಲಿ ನಡೆದಿರುವುದು ಬಹುಶಃ ಇದೇ ಮೊದಲ ಬಾರಿ. ವಾತಾವರಣ ಶಾಂತವಾಗಿದ್ದ ಕಾರಣ ಇಂತಹ ಘಟನೆ ಸಂಭವಿಸುತ್ತದೆ ಎಂದು ನಾವು ಎಂದಿಗೂ ನಂಬಿರಲಿಲ್ಲ. ಇದು ದುರದೃಷ್ಟಕರ” ಎಂದು ಆ ವ್ಯಕ್ತಿ ಹೇಳಿದರು.

ಪ್ರಮುಖ ಸುದ್ದಿ :-   ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement