ಆಕ್ರೋಶದ ನಂತರ ನೂತನ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಮಿತಿ ಕಡಿತಗೊಳಿಸಿದ ಐಸಿಐಸಿಐ ಬ್ಯಾಂಕ್‌

ನವದೆಹಲಿ: ನಗರ ಪ್ರದೇಶಗಳಲ್ಲಿ ನೂತನ ಗ್ರಾಹಕರಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ಮಿತಿಯನ್ನು 50,000 ರೂ.ಗಳಿಗೆ ಏರಿಸಿರುವ ಮಾನದಂಡಗಳನ್ನು ಐಸಿಐಸಿಐ ಬ್ಯಾಂಕ್ ಭಾಗಶಃ ರದ್ದುಗೊಳಿಸಿದೆ.
ಗ್ರಾಹಕರಿಂದ ಭಾರಿ ವಿರೋಧ ವ್ಯಕ್ತವಾದ ನಂತರ ಮತ್ತು ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ನಗರ ಪ್ರದೇಶಗಳಲ್ಲಿ ನೂತನ ಗ್ರಾಹಕರಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ಮಿತಿಯನ್ನು 10,000 ರೂ.ಗಳಿಂದ 50,000 ರೂ.ಗಳಿಗೆ ಏರಿಸಿದ ಕೆಲವು ದಿನಗಳ ನಂತರ ಈ ಪರಿಷ್ಕರಣೆ ಮಾಡಲಾಗಿದ್ದು, ಕನಿಷ್ಠ ಸರಾಸರಿ ಬ್ಯಾಲೆನ್ಸ್ 15,000 ರೂ.ಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಹಿಣದಿನ ಕನಿಷ್ಠ ಬ್ಯಾಲೆನ್ಸ್‌ ಮಿತಿಗಿಂತ 5,000 ರೂ. ಹೆಚ್ಚಾಗಿದೆ. ಅರೆ-ನಗರ ಪ್ರದೇಶಗಳಲ್ಲಿ ಹೊಸಗ್ರಾಹಕರು ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಅನ್ನು 25,000 ರೂ.ಗಳಿಂದ 7,500 ರೂ.ಗಳಿಗೆ ಇಳಿಸಲಾಗಿದೆ.
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹಳೆಯ ಗ್ರಾಹಕರಿಗೆ ಕನಿಷ್ಠ ಬ್ಯಾಲೆನ್ಸ್‌ ಮಿತಿ 5,000 ರೂ.ಗಳಲ್ಲಿಯೇ ಉಳಿದಿದೆ.
ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2020 ರಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ರದ್ದುಗೊಳಿಸಿತ್ತು. ಇತರ ಹೆಚ್ಚಿನ ಬ್ಯಾಂಕುಗಳು ಗಮನಾರ್ಹವಾಗಿ ಸಾಮಾನ್ಯವಾಗಿ ರೂ. 2,000 ರಿಂದ 10,000 ರೂ.ಗಳ ವರೆಗಗಿನ ಕಡಿಮೆ ಮಿತಿಗಳನ್ನು ಕಾಯ್ದುಕೊಳ್ಳುತ್ತವೆ.

ಪ್ರಮುಖ ಸುದ್ದಿ :-   ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement