ಅತ್ಯಾಚಾರವೆಸಗಿದ ಬಾಲಕಿಯನ್ನು ಕೋರ್ಟ್ ಆವರಣದಲ್ಲೇ ವಿವಾಹವಾದ ಆರೋಪಿ..!

 

ಪಾಟ್ನಾ: ಇಲ್ಲೊಂದು ವಿಕ್ಷಿಪ್ತ ವಿವಾಹ ನಡೆದಿದ್ದು, ಈ ವಿವಾಹಕ್ಕೆ ಕೊರ್ಟ್‌ ಆವರಣವೇ ಸಾಕ್ಷಿಯಾಗಿದೆ..!
ವ್ಯಕ್ತಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಾನು ಅತ್ಯಾಚಾರ ಮಾಡಿದ್ದ ಬಾಲಕಿಯನ್ನು ಕೋರ್ಟ್‌ ಆವರಣದಲ್ಲಿಯೇ ವಿವಾಹವಾಗಿದ್ದಾನೆ..!!
ಈ ಘಟನೆ ಘಟನೆ ಬಿಹಾರದ ಸಮಷ್ಟಿಪುರದಲ್ಲಿ ನಡೆದಿದೆ.ಇದು ಈಗ ಚರ್ಚೆಗೆ ಗ್ರಾಸವಾಗಿದೆ. ಆರೋಪಿ ಮೊಹಮ್ಮದ್ ರಾಜಾ ಎಂದು ಹೇಲಲಾಗಿದ್ದು, ರಹೀಂಪುರ ರುದೌಲಿ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ. ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮುಸ್ಸಾರಿ ಘರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೊಹಮ್ಮದನನ್ನು ಬಂಧಿಸಲಾಗಿತ್ತು.
ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯೂ ನಡೆದಿತ್ತು. ಪೋಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಮನಗಂಡ ಆರೋಪಿ ಇದಕ್ಕೆ ಉಪಾಯ ಹುಡುಕಿದ್ದಾನೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಂತ್ರಸ್ತ ಬಾಲಕಿಯ ಮನೆಯವರೊಂದಿಗೆ ಆರೋಪಿ ಮನೆಯವರು ಮಾತುಕತೆ ನಡೆಸಿ ಇದೀಗ ಆರೋಪಿ ಧರ್ಮಗುರುಗಳ ಸಮ್ಮುಖದಲ್ಲಿ ಬಾಲಕಿಯನ್ನು ವಿವಾಹವಾಗಿದ್ದಾನೆ. ವಿವಾಹದ ಬೆನ್ನಲ್ಲೇ ಧರ್ಮಗುರುವನ್ನು ಈಗ ವಿಚಾರಣೆಗೆ ಒಳಪಡಿಸಲಾಗಿದ್ದು, ಬಾಲಕಿ ಅಪ್ರಾಪ್ತಳಾಗಿರುವುದರಿಂದ ಇದನ್ನು ಬಾಲ್ಯ ವಿವಾಹ ಎಂದೂ ಪರಿಗಣಿಸುವ ಸಾಧ್ಯತೆ ನಿಚ್ಚಳವಾಗಿದ್ದು, ಧರ್ಮಗುರು ಸಹ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement