ವೀಡಿಯೊ…| ಎರಡು ಬಿಎಂಟಿಸಿ ಬಸ್​ ಮಧ್ಯೆ ಸಿಲುಕಿ ಆಟೋ ಅಪ್ಪಚ್ಚಿ ; ಅಪಘಾತದಲ್ಲಿ ಇಬ್ಬರು ಸಾವು

ಬೆಂಗಳೂರು: ಬೆಂಗಳೂರಿನ ಹನುಮಂತನಗರದ ಸೀತಾ ಸರ್ಕಲ್ ಬಳಿ ಶುಕ್ರವಾರ ಎರಡು ಬಿಎಂಟಿಸಿ ಬಸ್ ಗಳ​ ಮಧ್ಯೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದ್ದು, ಈ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆಟೋ ಚಾಲಕ ವಿಜಯಕುಮಾರ (50) ಹಾಗೂ ಪ್ರಯಾಣಿಕ ವಿಷ್ಣು ಬಾಪಟ್‌(70) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮುಂದೆ ಇದ್ದ ಬಿಎಂಟಿಸಿ ಬಸ್ ಚಾಲಕ ದಿಢೀರ್ ಬ್ರೇಕ್​ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಆಟೋ ಬಸ್ ಡಿಕ್ಕಿ ಹೊಡೆದಿದೆ. ಅದೇ ವೇಳೆ ಹಿಂದೆ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಈ ಆಟೊಕ್ಕೆ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದ್ದು, ಚಾಲಕ ಹಾಗೂ ಪ್ರಯಾಣಿಕ ಮೃತಪಟ್ಟಿದ್ದಾರೆ.

https://x.com/i/status/1895394385640222875

ವಿಷ್ಣು ಅವರು ಆಯುರ್ವೇದ ವೈದ್ಯರಾಗಿದ್ದು, ಹನುಮಂತನಗರದಲ್ಲಿ ವಾಸಿಸುತ್ತಿದ್ದರು. ಹೊಸಕೆರೆಹಳ್ಳಿ ಕ್ರಾಸ್​​ನ 80 ಅಡಿ ರಸ್ತೆ ಕಡೆಯಿಂದ ಸೀತಾ ಸರ್ಕಲ್ ಕಡೆಗೆ ಬರುತ್ತಿದ್ದಾಗ ಮುಂದಿದ್ದ ಬಿಎಂಟಿಸಿ ಬಸ್‌ ಬ್ರೇಕ್‌ ಹಾಕಿದ್ದರಿಂದ ಆಟೊ ಹಿಂಬದಿಯಿಂದ ಗುದ್ದಿದೆ. ಈ ವೇಳೆ ಆಟೊ ಹಿಂದೆ ಬರುತ್ತಿದ್ದ ಬಿಎಂಟಿಸಿ ಬಸ್ ಆಟೊಕ್ಕೆ ಗುದ್ದಿದೆ. ಹೀಗಾಗಿ ಎರಡು ಬಸ್‌ಗಳ ನಡುವೆ ಸಿಲುಕಿದ ಆಟೊ ಅಪ್ಪಚ್ಚಿಯಾಗಿದೆ. ಅಪ್ಪಚ್ಚಿಯಾದ ಆಟೋದಲ್ಲಿದ್ದ ಚಾಲಕ ಹಾಗೂ ಆಯುರ್ವೇಧ ವೈದ್ಯ ವಿಷ್ಣು ಎಂಬವರು ಸ್ಥಳದಲ್ಲೇ ಸಾವಿಗೀಡಾದ್ದಾರೆ. ಈ ಸಂಬಂದ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement