ಕಾಂಗ್ರೆಸ್ ಮತ್ತೊಂದು ಆಘಾತ: ತ್ರಿಪುರ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ರಾಜೀನಾಮೆ

ನವದೆಹಲಿ: ಕಾಂಗ್ರೆಸ್‌ಗೆಮತ್ತೊಂದು ಹಿನ್ನಡೆಯಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್‌ ಪಕ್ಷದ ಹಂಗಾಮಿ ರಾಜ್ಯಾಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಸುಶ್ಮಿತಾ ದೇವ್ ತೊರೆದು ಟಿಎಂಸಿಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈಗ ಬಿಸ್ವಾಸ್‌ ಅವರ ರಾಜೀನಾಮೆ ಬಂದಿದೆ. ಬಿಸ್ವಾಸ್ ಅವರು ದೇವ್‌ಗೆ ಹತ್ತಿರದವರು ಎಂದು ವರದಿಯಾಗಿದೆ.
ಬಿಸ್ವಾಸ್ ತಮ್ಮ ರಾಜೀನಾಮೆಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.
“ನಾನು ಟಿಪಿಸಿಸಿ ಅಧ್ಯಕ್ಷರಾಗಿದ್ದಾಗ ಸಹಕಾರಕ್ಕಾಗಿ ಎಲ್ಲಾ ಕಾಂಗ್ರೆಸ್ ನಾಯಕರು, ಬೆಂಬಲಿಗರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ರಾಜಕೀಯದಿಂದಲೂ ನಿವೃತ್ತಿಯಾಗಿದ್ದೇನೆ. ಗೌರವಾನ್ವಿತ ಸೋನಿಯಾ ಗಾಂಧಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಾನು ಸದ್ಯಕ್ಕೆ ರಾಜಕೀಯದಿಂದ ಹೊರಗುಳಿಯುತ್ತೇನೆ. ನಾನು ಇಂದು ನನ್ನ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.
ಬಿಸ್ವಾಸ್ ಅವರನ್ನು ಡಿಸೆಂಬರ್ 2019 ರಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.
ಈಶಾನ್ಯದಲ್ಲಿ ಕಾಂಗ್ರೆಸ್ ಮತ್ತೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವಾಗ ಅವರ ರಾಜೀನಾಮೆ ನೀಡಿದ್ದಾರೆ ಮತ್ತು ಎರಡು ವರ್ಷಗಳಲ್ಲಿ ತ್ರಿಪುರಾ ವಿಧಾನಸಭಾ ಚುನಾವಣೆಗೆ ಹೋಗಲಿದೆ.
ಬಿಸ್ವಾಸ್ ಅವರು ಸುಶ್ಮಿತಾ ದೇವ್ ಅವರ ಸಮೀಪವರ್ತಿಗಳು ಮತ್ತು ಅವರು ಟಿಎಂಸಿ ಸೇರಲು ಪಕ್ಷ ತೊರೆದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರು ಕೂಡ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement