ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: ಕೊರೊನಾ ಎರಡನೇ ಅಲೆಯಿಂದಾಗಿ 2020-21ನೇ ಹಣಕಾಸು ವರ್ಷಕ್ಕೆ ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಜುಲೈ 31ರ ಬದಲಿಗೆ ಸೆಪ್ಟೆಂಬರ್ 30ರವರೆಗೆ ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ, ಮಾರ್ಚ್ 31 ಕ್ಕೆ ಕೊನೆಗೊಂಡ ಹಿಂದಿನ ಹಣಕಾಸು ವರ್ಷಕ್ಕೆ (2020-21) ಐಟಿಆರ್-1 ಅಥವಾ ಐಟಿಆರ್ 4 ಸಲ್ಲಿಸುವ ವೈಯಕ್ತಿಕ ತೆರಿಗೆದಾರರಿಗೆ ಕೊನೆಯ ದಿನಾಂಕ ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 31 ಆಗಿದೆ. ಆದರೆ ತೆರಿಗೆದಾರರು ಈಗ ಜುಲೈ 31 ರ ಬದಲು ಸೆಪ್ಟೆಂಬರ್ 30ರ ವರೆಗೂ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದಾಗಿದೆ.
ಅದೇ ರೀತಿ, ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಕಂಪನಿಗಳು ಮತ್ತು ಸಂಸ್ಥೆಗಳಿಗೆ, ಗಡುವನ್ನು ಅಕ್ಟೋಬರ್ 31 ರ ಬದಲಿಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಕಂಪನಿಗಳಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ನವೆಂಬರ್ 30ರ ವರೆಗೂ ವಿಸ್ತರಿಸಲಾಗಿದೆ.
ವಿಳಂಬವಾದ ಐಟಿಆರ್ ದಂಡದೊಂದಿಗೆ ಸಲ್ಲಿಸಲು ಸರ್ಕಾರ ಗಡುವನ್ನು ವಿಸ್ತರಿಸಿದೆ.ಸೆಪ್ಟೆಂಬರ್ 30 ರ ಗಡುವಿನ ನಂತರವೂ ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿಫಲರಾದ ತೆರಿಗೆದಾರರಿಗೆ ಐಟಿಆರ್ ಸಲ್ಲಿಸಲು ಈಗ ಕೊನೆಯ ದಿನಾಂಕ ಜನವರಿ 31 ಆಗಿರುತ್ತದೆ ಎಂದು ಇಲಾಖೆ ಹೇಳಿದೆ.

ಪ್ರಮುಖ ಸುದ್ದಿ :-   ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement