ವೀಡಿಯೊ…| ಹಾಸನ : ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಟ್ಟಿಸಿಕೊಂಡು ಬಂದ ಕೋಪಗೊಂಡ ಕಾಡಾನೆ ; ಸ್ವಲ್ಪದರಲ್ಲೇ ಪಾರು…

ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಇಬ್ಬರು ಅರಣ್ಯಾಧಿಕಾರಿಗಳನ್ನು ಕಾಡು ಆನೆಯೊಂದು ಅಟ್ಟಿಸಿಕೊಂಡು ಹೋದ ಆಘಾತಕಾರಿ ಘಟನೆ ನಡೆದಿದ್ದು, ಇಬ್ಬರು ಅರಣ್ಯಾಧಿಕಾರಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಆನೆ ತನ್ನತ್ತ ಧಾವಿಸಿ ಬರುತ್ತಿದ್ದರೂ ಕ್ಯಾಮರಾಮನ್ ಪ್ರಾಣಕ್ಕೂ ಲೆಕ್ಕ ಕೊಡದೆ ಧೈರ್ಯವಾಗಿ ನಿಂತು ಘಟನೆಯನ್ನು ಚಿತ್ರೀಕರಿಸಿದ್ದಾರೆ.
ಹಾಸನದ ಬೇಲೂರು ತಾಲೂಕಿನ ಗ್ರಾಮದಲ್ಲಿ ಕಾಡು ಆನೆಯೊಂದು ದಾರಿ ತಪ್ಪಿ ಕೃಷಿ ಭೂಮಿಗೆ ನುಗ್ಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಕಾಡಿಗೆ ಕಳುಹಿಸಲು ಮುಂದಾದಾಗ ಅದು ಆಕ್ರೋಶಗೊಂಡಿತು. ಅಲ್ಲಿಂದ ಕಾಡಿನ ಕಡೆಗೆ ತೆರಳುವ ಬದಲು ಸಿಟ್ಟಿಗೆದ್ದ ಆನೆಯು ಅಧಿಕಾರಿಗಳನ್ನು ಓಡಿಸತೊಡಗಿತು. ಅದೃಷ್ಟವಶಾತ್ ಘಟನೆಯಲ್ಲಿ

ಯಾರಿಗೂ ಗಾಯಗಳಾಗಿಲ್ಲ.
ಪ್ರಶಾಂತ ಮತ್ತು ಸುನೀಲ ಎಂದು ಗುರುತಿಸಲಾದ ಆನೆ ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದಂತೆ ಇಬ್ಬರು ಅಧಿಕಾರಿಗಳು ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗುತ್ತಿರುವ ವೀಡಿಯೊ ವೈರಲ್ ಆಗಿದೆ. ಅವರು ತಪ್ಪಿಸಿಕೊಳ್ಳಲು ಮುಂದೆ ಓಡುತ್ತಿದ್ದಾಗ ಆನೆ ಅವರ ಹಿಂದೆ ಓಡಿ ಬರುತ್ತಿರುವುದು ಕಂಡುಬಂದಿದೆ.
ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ. ಆದರೆ ಈ ನಾಟಕೀಯ ಕ್ಷಣವನ್ನು ಸೆರೆಹಿಡಿದ ಕ್ಯಾಮೆರಾಮನ್‌ ಅವರನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಹಿಂದಿನ ಘಟನೆ
ಆನೆಗಳು ಆಕ್ರೋಶಗೊಂಡು ಮನುಷ್ಯರ ಮೇಲೆ ದಾಳಿ ಮಾಡಿದ ಹಲವು ನಿದರ್ಶನಗಳಿವೆ. ಹಿಂದಿನ ಘಟನೆಯಲ್ಲಿ, ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜೆಸಿಬಿ ಯಂತ್ರ ಬಳಸಲಿ ಆನೆ ಹೆದರಿಸಲು ಮುಂದಾದ ನಂತರ ಆನೆಯೊಂದು ದಾಳಿ ಮಾಡಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆನೆ ತನ್ನ ಸೊಂಡಿಲಿನಿಂದ ಜೆಸಿಬಿ ಯಂತ್ರವನ್ನು ಎತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement