ನರೇಗಾ ಕಾರ್ಮಿಕರಿಂದ ಕೃಷಿ ಹೊಂಡ ಸ್ಥಳದಲ್ಲಿ ವಿಶಿಷ್ಟ ಸ್ವಾತಂತ್ರೋತ್ಸವ ಆಚರಣೆ

ಯಾದಗಿರಿ :ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿಯೇ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ಇಲ್ಲಿನ ಸಿದ್ಧಯ್ಯನ ಬೆಟ್ಟದ ಹತ್ತಿರ ನಿರ್ಮಾಣಗೊಂಡ ಕೃಷಿ ಹೊಂಡದಲ್ಲಿ ಸ್ವಾತಂತ್ರೋತ್ಸವಕ್ಕೆ ಮುನ್ನಾ ದಿನವೇ ನರೇಗಾ ಕೂಲಿ ಕಾರ್ಮಿಕರು ಶ್ರದ್ದೆಯಿಂದ ಕಲಾತ್ಮಕವಾಗಿ ಮಣ್ಣಿನಿಂದ ನರೇಗಾ, ಭಾರತ ನಕಾಶೆ ಮತ್ತು ಧ್ವಜಕಟ್ಟೆ ನಿರ್ಮಿಸಿದ್ದಾರೆ. ಸ್ವಾತಂತ್ರ ದಿನವಾದ ಭಾನುವಾರದಂದು ಕೂಲಿ ಕಾರ್ಮಿಕರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಕೂಲಿಕಾರಿಂದಲೇ ದ್ವಜಾರೋಹಣವನ್ನು ನೆರವೇರಿಸಿದ್ದು ವಿಶೇಷವಾಗಿತ್ತು. ಕೃಷಿ ಹೊಂಡದಲ್ಲಿ ವಿಭಿನ್ನ ಆಲೋಚನಯಿಂದ ಕೂಡಿದ, ವಿಶೇಷವಾದ ಸ್ವಾತಂತ್ರ್ಯೋತ್ಸವ ಸಂಭ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement