ನಿಯಮ ಉಲ್ಲಂಘನೆ: 14 ಬ್ಯಾಂಕುಗಳಿಗೆ ದಂಡ ವಿಧಿಸಿದ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಯಮಗಳ ಉಲ್ಲಂಘನೆಗೆ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳು ಒಳಗೊಂಡಂತೆ ಸುಮಾರು 14 ಬ್ಯಾಂಕುಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದೆ.
ಇತ್ತೀಚೆಗೆ ಆರ್‌ಬಿಐ ಯು ದೊಡ್ಡ ಗ್ರೂಪ್ ನ ಕಂಪನಿಗಳ ಅಕೌಂಟ್ ಪರಿಶೀಲಿಸಿದಾಗ ಈ 14 ಬ್ಯಾಂಕುಗಳು ಆರ್‌ಬಿಐನ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ನಿಯಾಮಾವಳಿಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಕಂಪನಿಗಳ ಅಕೌಂಟ್ ಗಳನ್ನು ಪರಿಶೀಲಿಸಿದಾಗ ಬ್ಯಾಂಕುಗಳು ಬ್ಯಾಂಕಿನ ನಿಯಂತ್ರಣ ಕಾಯ್ದೆ 1949 ರ ನಿಬಂಧನೆಗಳನ್ನು ಮತ್ತು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಗಮನಕ್ಕೆ ಬಂದಿದೆ. ಅವುಗಳನ್ನು ಉಲ್ಲಂಘಿಸಿದಕ್ಕೆ ಆರ್‌ಬಿಐ ಈ ಎಲ್ಲಾ ಬ್ಯಾಂಕುಗಳಿಗೆ ದಂಡ ವಿಧಿಸಿ ನೋಟಿಸ್ ಕಳುಹಿಸಲಾಗಿದೆ. ದಂಡ ವಿಧಿಸಿದ ಬ್ಯಾಂಕುಗಳ ಉತ್ತರಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಮತ್ತು 14 ಬ್ಯಾಂಕುಗಳ ಮೇಲೆ ದಂಡವನ್ನು ವಿಧಿಸುವ ಅಗತ್ಯವಿದೆ ಎಂದು ಆರ್‌ಬಿಐ ತಿಳಿಸಿದೆ.
ಬಹುಶಃ, ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಒಂದೇ ದಿನದಲ್ಲಿ ಅತಿ ಹೆಚ್ಚು ಬ್ಯಾಂಕುಗಳು ಆರ್‌ಬಿಐನಿಂದ ವಿತ್ತೀಯ ದಂಡ ಪಡೆದಿರುವುದು ಇದೇ ಮೊದಲು ಎಂದು ಹೇಳಾಗಿದೆ.
ಬ್ಯಾಂಕುಗಳ ಹೆಸರುಗಳು:

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

ಬಂಧನ್ ಬ್ಯಾಂಕ್ ಲಿಮಿಟೆಡ್.
ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಮಹಾರಾಷ್ಟ್ರ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಕ್ರೆಡಿಟ್ ಸ್ಯೂಸ್ ಎಜಿ
ಇಂಡಿಯನ್ ಬ್ಯಾಂಕ್
ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್.
ಕರ್ನಾಟಕ ಬ್ಯಾಂಕ್ ಲಿಮಿಟೆಡ್.
ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಲಿಮಿಟೆಡ್ ಉತ್ತಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್.

ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್

ಈ ಬ್ಯಾಂಕುಗಳಿಗೆ ದಂಡ ವಿಧಿಸಲಾಗಿದೆ ಎಂದು ದಿ ಹಿಂದು ವರದಿ ಮಾಡಿದೆ.   ಸಾಲವನ್ನು ನೀಡುವುದರಲ್ಲಿ ಆರ್‌ಬಿಐ ತಿಳಿಸಿದ ನಿಯಮಗಳನ್ನು ಪಾಲಿಸದಿರುವುದರಿಂದ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಬ್ಯಾಂಕಿನಿಂದ ಹಣಕಾಸು ಒದಗಿಸುವಲ್ಲಿ ಮತ್ತು ಇನ್ನಿತರೇ ಕಾರಣಗಳಲ್ಲಿ ಬ್ಯಾಂಕುಗಳು ನಿಯಮಗಳನ್ನು ಪಾಲಿಸದೆ ಇರುವುದರಿಂದ ಈ ಬ್ಯಾಂಕುಗಳ ಮೇಲೆ ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಬಹುಶಃ, ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಒಂದೇ ದಿನದಲ್ಲಿ ಅತಿ ಹೆಚ್ಚು ಬ್ಯಾಂಕುಗಳು ಆರ್‌ಬಿಐನಿಂದ ವಿತ್ತೀಯ ದಂಡ ಪಡೆದಿರುವುದು ಇದೇ ಮೊದಲು ಎಂದು ಹೇಳಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement