ಇಪಿಎಫ್ಒ (EPFO) ವ್ಯಾಪ್ತಿಗೆ ಬರುವ ದೇಶದ ಸುಮಾರು 6 ಕೋಟಿ ಸದ್ಯರಿಗೆ ಇದು ಒಳ್ಳೆಉ ಸುದ್ದಿ. ನೌಕರರ ಭವಿಷ್ಯ ನಿಧಿ ಸಂಸ್ಥೆ 2020-21ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗುವ ಶೇ.8:5 ಬಡ್ಡಿಯನ್ನು ಜುಲೈ ಅಂತ್ಯದೊಳಗೆ ನೀಡಲಾಗುತ್ತದೆ. ಇಪಿಎಫ್ ಬಡ್ಡಿಯನ್ನು ಜುಲೈ ಅಂತ್ಯದ ವೇಳೆಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆಗೆ ಕಾರ್ಮಿಕ ಸಚಿವಾಲಯವೂ ಹಸಿರು ನಿಶಾನೆ ತೋರಿದೆ.
2020-2021ರ ಆರ್ಥಿಕ ವರ್ಷದಲ್ಲಿ ಈ ಸೇವೆಯನ್ನು ನೌಕರರು ಪಡೆಯಬಹುದು. ಅಂದಾದಹಾಗೆಯೇ ಕಾರ್ಮಿಕ ಸಚಿವಾಲಯ ಅನುಮೋದನೆಯ ನಂತರ ಶೇ. 8.5 ರಷ್ಟು ಬಡ್ಡಿ ಮೊತ್ತವು ಇಪಿಎಫ್ ಚಂದಾದಾರರ ಖಾತೆಗೆ ಬರಲಿದೆ. ಸಚಿವಾಲಯದ ವರ್ಗಾವಣೆ ನಂತರ ಇದರ ಪ್ರಕ್ರಿಯೆ ಶುರುವಾಗಲಿದೆ
6 ಕೋಟಿಗೂ ಹೆಚ್ಚು ಇಪಿಎಫ್‌ಒ ಸದಸ್ಯರಿಗೆ ಜೂನ್ 1 ರಿಂದ ಕೆಲವು ನಿಯಮಗಳು ಬದಲಾಗಿವೆ. ಸಾಮಾಜಿಕ ಭದ್ರತಾ ಸಂಹಿತೆ 2020 ರ ಅಡಿಯಲ್ಲಿ ಇಪಿಎಫ್ಒ ಈ ನಿರ್ಧಾರ ತೆಗೆದುಕೊಂಡಿದೆ.
ಈ ನಿಯಮದ ಪ್ರಕಾರ, ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಅಂದರೆ ಜೂನ್ 1 ರ ನಂತರ ಖಾತೆಯನ್ನು ಆಧಾರ್‌ನೊಂದಿಗೆ (Aadhaar) ಲಿಂಕ್ ಮಾಡಲಾಗದ ಖಾತೆದಾರರಿಗೆ ಇಸಿಆರ್ ಭರ್ತಿ ಮಾಡಲಾಗುವುದಿಲ್ಲ. ಅಂದರೆ, ಅವರ ಕಂಪನಿ ನೀಡುವ ಕೊಡುಗೆ ಪಿಎಫ್ ಖಾತೆಯಲ್ಲಿ ಪಡೆಯುವುದು ಖಾತೆದಾರರಿಗೆ ಕಷ್ಟಕರವಾಗಲಿದೆ. ನೌಕರರು ಖಾತೆಯಲ್ಲಿ ತಮ್ಮ ಕೊಡುಗೆ ಮಾತ್ರ ಪಡೆಯಬಹುದು.
ಎಲ್ಲ ಖಾತೆದಾರರ ಯುಎಎನ್ (UAN) ಕೂಡ ಆಧಾರ್ ಪರಿಶೀಲನೆಯಾಗಿರುವುದು ಅನಿವಾರ್ಯವಾಗಿದೆ. ನೀವೂ ಕೂಡ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ, ನಿಮ್ಮ ಖಾತೆಯನ್ನು ಮೊದಲು ಆಧಾರ್ ಜೊತೆಗೆ ಲಿಂಕ್ ಮಾಡಿ ಬಳಿಕ ಯುಎಎನ್ ( UAN) ಸಂಖ್ಯೆಯನ್ನೂ ಕೂಡ ಆಧಾರ್ ಕಾರ್ಡ್ ನಿಂದ ಪರಿಶೀಲನೆ ಮಾಡಿ.
ನಿಮ್ಮ ಕಾಮೆಂಟ್ ಬರೆಯಿರಿ