ರಾಜ್ಯಸಭಾ ಚುನಾವಣೆ : ಮತದಾನಕ್ಕೆ ಗೈರಾದ ಬಿಜೆಪಿ ಶಾಸಕ ಹೆಬ್ಬಾರ..!

ಬೆಂಗಳೂರು : ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಂದು (ಫೆಬ್ರವರಿ 27) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ವಿಧಾನಸೌಧದಲ್ಲಿ ನಡೆದಿದ್ದ ಮತದಾನ ಅಂತ್ಯವಾಗಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದ ಓರ್ವ ಅಭ್ಯರ್ಥಿಗೆ ಗೆಲುವಾಗಿದೆ. ಒಟ್ಟು 223 ಮತಗಳ ಪೈಕಿ 222 ಶಾಸಕರು ತಮ್ಮ ಮತದಾನ ಮಾಡಿದ್ದಾರೆ. ಶಾಸಕ ಎಸ್‌.ಟಿ.ಸೋಮಶೇಖರ ಅವರು ಕಾಂಗ್ರೆಸ್ಸಿಗೆ ಅಡ್ಡಮತದಾನ ಮಾಡಿ ಬಿಜೆಪಿಗೆ ಶಾಕ್‌ ನೀಡಿದರೆ, ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಮಾತ್ರ ಮತದಾನಕ್ಕೆ ಬಾರದೆ ಬಿಜೆಪಿಗೆ ಶಕ್‌ ನೀಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಶೇ.99.5ರಷ್ಟು ಮತದಾನವಾಗಿದೆ.
ಕಾಂಗ್ರೆಸ್‌ ಪಕ್ಷದ 135 ಶಾಸಕರು, ಮೂವರು ಪಕ್ಷೇತರ ಶಾಸಕರು, ಬಿಜೆಪಿಯ 65 ಶಾಸಕರು, ಜೆಡಿಎಸ್‌ನ 19 ಶಾಸಕರು ಮತದಾನ ಮಾಡಿದ್ದಾರೆ. ಯಶವಂತಪುರ ಬಿಜೆಪಿ ಎಸ್​​.ಟಿ ಸೋಮಶೇಖರ ಸ್ವಪಕ್ಷದ ಅಭ್ಯರ್ಥಿ ಬದಲಿಗೆ ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಹೇಳಲಾಗಿದೆ. ಹಾಗೂ ಮತ್ತೋರ್ವ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ​ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿ ಶಾಕ್ ಕೊಟ್ಟಿದ್ದಾರೆ.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

ಸಂಪರ್ಕಕ್ಕೆ ಸಿಗದ ಹೆಬ್ಬಾರ..?
ಶಿವರಾಮ ಹೆಬ್ಬಾರ​ ಯಾರ ಸಂಪರ್ಕಕ್ಕೂ ಸಿಗದೇ ಫೋನ್ ಸ್ವಿಚ್ ಆಫ್​ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದರು ಎನ್ನಲಾಗಿದೆ. ಅವರು ಸಂಪರ್ಕಕ್ಕೆ ಸಿಗದ ಕಾರಣ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ ಅವರು ಬಂದು ಮತದಾನ ಮಾಡುವಂತೆ ಹೆಬ್ಬಾರ್​ ಅವರಿಗೆ ಸುದ್ದಿವಾಹಿನಿಗಳ ಮೂಲಕ ಮನವಿ ಮಾಡಿದ್ದರು. ಆದರೂ ಸಹ ಹೆಬ್ಬಾರ್​ ಮತದಾನಕ್ಕೆ ಗೈರಾದ್ದಾರೆ. ಇಂದು, ಮಂಗಳವಾರ ಮಧ್ಯಾಹ್ನದ ವರೆಗೆ ಇಬ್ಬರು ಶಾಸಕರು ಮಾತ್ರ ಮತದಾನ ಮಾಡುವುದು ಬಾಕಿ ಇತ್ತು. ಮತ್ತೋರ್ವ ಶಾಸಕ ಎಂ.ಆರ್‌. ಮಂಜುನಾಥ ಅವರು ಬಂದು ಮತಚಲಾಯಿಸಿದ್ದಾರೆ. ಆದರೆ ಶಿವರಾಮ ಹೆಬ್ಬಾರ ಮಾತ್ರ ಮತದಾನಕ್ಕೆ ಬಂದಿಲ್ಲ ಎಂದು ವರದಿಯಾಗಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಂಡಗೆ, ಕಾಂಗ್ರೆಸ್​ನ ಮೂವರು ಅಜಯ್ ಮಕೇನ್, ನಾಸೀರ್ ಹುಸೇನ್ ಹಾಗೂ ಚಂದ್ರಶೇಖರ ಗೆಲ್ಲುವುದು ನಿರೀಕ್ಷಿತವಾಗಿದೆ.

4.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement