ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ನಿರಾಣಿ ಸವಾಲು

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬಾರದು ಎಂದು ನಾನು ಹೇಳಿದ್ದೇನೆಂದು ನನ್ನ ಮೇಲೆ ಮಾಡಿರುವ ಆರೋಪ ಸಾಬೀತು ಮಾಡಿದರೆ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ, ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಪೀಠ ತೊರೆದು ರಾಜಕೀಯಕ್ಕೆ ಬರಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ಮುರಗೇಶ ನಿರಾಣಿ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸವಾಲು ಹಾಕಿದ್ದಾರೆ. ಶುಕ್ರವಾರ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ವಾಮೀಜಿಯವರು, “ಪಂಚಮಸಾಲಿ 2ಎ ಮೀಸಲಾತಿ ಘೋಷಣೆ ಆಗದೇ ಇರಲು ಬಾಗಲಕೋಟೆ ಜಿಲ್ಲೆಯ ನಮ್ಮ ಸಮಾಜದ ಸಚಿವರು ಕಾರಣ’’ ಎಂದು ಆರೋಪಿಸಿದ್ದರು. ಈ ಕುರಿತು ನಿರಾಣಿಯವರು ಸ್ವಾಮೀಜಿ ವಿರುದ್ಧ ಗರಂ ಆಗಿದ್ದಾರೆ. “ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ನನ್ನ ಬಗ್ಗೆ ಪದೇಪದೇ ಮಾತನಾಡಿದರೂ ಮಾತಾಡಿದರೂ, ಅವರು ಎಲ್ಲೆ ಭೇಟಿಯಾದರೂ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು., ಆದರೆ “ನಾನು ಪಂಚಮಸಾಲಿ ಮೀಸಲಾತಿ ಕೊಡಲು ಅಡ್ಡಿ ಮಾಡಿದೆ ಎನ್ನಲು ಅವರು ಸಾಕ್ಷಿ ಕೊಟ್ಟರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ಅವರು ಪೀಠ ಬಿಟ್ಟು ರಾಜಕೀಯಕ್ಕೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನ ಪರಿಷತ್ ಚುನಾವಣೆ; 4 ಕ್ಷೇತ್ರಗಳಲ್ಲಿ ಎರಡರಲ್ಲಿ ಎನ್‌ಡಿಎ ಗೆಲುವು, ಉಳಿದ ಎರಡರಲ್ಲೂ ಗೆಲುವು ಬಹುತೇಕ ಖಚಿತ

ಇದಲ್ಲದೆ, ಸ್ವಾಮೀಜಿಯವರ “ನಾವು ಮನಸ್ಸು ಮಾಡಿದರೆ, ಇಡೀ ರಾಜ್ಯದಲ್ಲಿ ಅವರನ್ನು ಸೋಲಿಸುತ್ತೇವೆ ಇವರನ್ನು ಸೋಲಿಸುತ್ತೇವೆ. ಎಂದು ಹೇಳುತ್ತೀರಿ. 2018ರಲ್ಲಿ ನಿಮ್ಮ ಪೀಠ ಇರುವ ಕ್ಷೇತ್ರದಲ್ಲೇ, ಹುನಗುಂದದಲ್ಲಿ ಕಾಂಗ್ರೆಸ್ ನ ವಿಜಯಾನಂದ ಕಾಶಪ್ಪನವರ ಅವರನ್ನು ಗೆಲ್ಲಿಸಲು ಆಗಲಿಲ್ಲ. 2019ರಲ್ಲಿ ನಿಮ್ಮ‌ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ (ವೀಣಾ ಕಾಶಪ್ಪನವರ) ಗೆಲ್ಲಿಸಲು ಆಗಲಿಲ್ಲ ಎಂದು ಹೇಳಿದರು.
ದೊಡ್ಡ ಸ್ಥಾನದಲ್ಲಿ ಇರುವವರು ಯಾರ ಬಗ್ಗೆಯೂ ಹೀಗೆಲ್ಲ ಮಾತನಾಡಬಾರದು ಎಂದರು.
ಮುರಗೇಶ ನಿರಾಣಿ ಇನ್ನೂ ಬಚ್ಚಾ ಎಂಬ ಹೇಳಿಕೆ ನೀಡಿರುವ ಬಗ್ಗೆ ತಿರುಗೇಟು ನೀಡಿದ ಸಚಿವರು, “ನಾನು ಬಚ್ಚಾನೇ… ಮೂರು ಗ್ಲೋಬಲ್‌ ಇನ್ವೆಸ್ಟರ್‌ ಮೀಟ್ ಮಾಡಿದೆ. ಅವರು ಮಾತಾಡೋರು 7 ತಿಂಗಳು‌ ಮಾತ್ರ ಮಂತ್ರಿಯಾಗಿದ್ದರು. ಮೂರನೇ ಮಹಡಿಯಲ್ಲಿ ಕೂಡ್ತೇನೆ ಅನ್ನೋದು ಸ್ವಯಂ ಘೋಷಿತ ಮುಖ್ಯಮಂತ್ರಿ. ಯಾರು ಬಚ್ಚಾ ಅನ್ನೋದು ಜನರಿಗೆ ಗೊತ್ತಾಗುತ್ತೆ’’ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವನಾಗಿದ್ದರೂ ಸಹಿತ, ಎಲ್ಲಾ ಸಮಾಜದವರನ್ನು ಒಂದೇ ರೀತಿಯಲ್ಲಿ ನೋಡುತ್ತ ಬಂದಿದ್ದೇನೆ. ಎಂಬತ್ತು ಲಕ್ಷಕ್ಕೂ ಹೆಚ್ಚು ಜನರಿರುವ ಸಮುದಾಯದಲ್ಲಿ ಪಂಚಮಸಾಲಿ ಸಮುದಾಯದಲ್ಲಿ ಹರಿಹರ ಹಾಗೂ ಕೂಡಲಸಂಗಮದಲ್ಲಿ ಎರಡು ಪೀಠಗಳಿವೆ. ಮೂರನೇ ಪೀಠವನ್ನೂ ಮಾಡಿದ್ದೇವೆ. ಇನ್ನೂ ಎರಡು ಪೀಠ ಮಾಡುತ್ತೇವೆ. ಪೀಠವಾಗುವ ಮೊದಲೇ ಮಂತ್ರಿಯಾಗಿದ್ದೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ಪರಿಷತ್‌ ಚುನಾವಣೆ | ಎಲ್ಲ 4 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಗೆಲುವು ; ಕಾಂಗ್ರೆಸ್‌ಗೆ ಮುಖಭಂಗ ; ಅಭ್ಯರ್ಥಿಗಳ ಗೆಲವಿನ ಅಂತರವೆಷ್ಟು ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement