ನಿತೀಶಕುಮಾರ ಎನ್‌ಡಿಎಗೆ ಬೆಂಬಲ ನೀಡ್ತಾರಾ? ಜೆಡಿಯು ಹೇಳಿದ್ದೇನು..?

ನವದೆಹಲಿ: ಲೋಕಸಭೆ ಚುನಾವಣೆ 2024ರ ಮತ ಎಣಿಕೆಯಲ್ಲಿ ಎನ್‌ಡಿಎ 300 ಸ್ಥಾನಗಳನ್ನು ಗೆಲ್ಲುವ ಸಮೀಪದಲ್ಲಿದೆ. ಇಂಡಿಯಾ ಮೈತ್ರಿಕೂಟವು 230ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರೊಂದಿಗೆ ಇಂಡಿಯಾ ಮೈತ್ರಿಕೂಟದ ನಾಯಕ ಶರದ್ ಪವಾರ ಅವರು ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳ ಹೊರಬಿದ್ದಿವೆ.
ಕೇಂದ್ರದಲ್ಲಿ ಸರ್ಕಾರ ರಚಿಸಲು ನಿತೀಶಕುಮಾರ ಅವರ ಜೆಡಿಯು ಬೆಂಬಲವು ಎನ್‌ಡಿಎಗೆ ನಿರ್ಣಾಯಕವಾಗಬಹುದು.
543 ಲೋಕಸಭಾ ಸ್ಥಾನಗಳಲ್ಲಿ 294 ಸ್ಥಾನಗಳಲ್ಲಿ ಎನ್‌ಡಿ ಮುನ್ನಡೆ ಸಾಧಿಸಿದೆ ಹಾಗೂ 232 ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. ಸರಳ ಬಹುಮತಕ್ಕೆ 272 ಸ್ಥಾನಗಳು ಬೇಕು.
ಊಹಾಪೋಹಗಳ ನಡುವೆ, ನಿತೀಶಕುಮಾರ ಅವರ ಜನತಾ ದಳ (ಯುನೈಟೆಡ್) ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ಬೆಂಬಲವನ್ನು ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

“ನಾವು ನಮ್ಮ ಹಿಂದಿನ ನಿಲುವನ್ನು ಮುಂದುವರಿಸುತ್ತೇವೆ. ನಿತೀಶಕುಮಾರ ನೇತೃತ್ವದಲ್ಲಿ, ಜೆಡಿಯು ಮತ್ತೊಮ್ಮೆ ಎನ್‌ಡಿಎಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ…ನಾವು ಎನ್‌ಡಿಎ ಜೊತೆಗಿದ್ದೇವೆ, ನಾವು ಎನ್‌ಡಿಎ ಜೊತೆಯಲ್ಲಿಯೇ ಇರುತ್ತೇವೆ ಎಂದು ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ಸ್ಪಷ್ಟಪಡಿಸಿದ್ದಾರೆ.
ಮತ್ತೊಬ್ಬ ಜೆಡಿಯು ನಾಯಕ ನೀರಜಕುಮಾರ ಾವರು ಸಿಎನ್‌ಎನ್ ನ್ಯೂಸ್ 18 ಜೊತೆ ಮಾತನಾಡಿ, ತಮ್ಮ ಪಕ್ಷವು ಎನ್‌ಡಿಎ ಜೊತೆ ಇರಲಿದೆ ಎಂದು ಹೇಳಿದ್ದಾರೆ. “ಸಮ್ಮಿಶ್ರ ಎಂದರೆ ಏನು ಎಂದು ನಿತೀಶಕುಮಾರ ಅರ್ಥಮಾಡಿಕೊಂಡಿದ್ದಾರೆ; ಪ್ರತಿಪಕ್ಷಗಳು ನಿತೀಶಕುಮಾರ ಅವರನ್ನು ಅಂಡರ್‌ ಎಸ್ಟಿಮೇಟ್‌ ಮಾಡಿವೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬೀದಿ ನಾಯಿಯ ಮೇಲೆ ಚಿರತೆ ದಾಳಿ; ಸ್ನೇಹಿತನ ರಕ್ಷಣೆಗಾಗಿ ಚಿರತೆಯ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿಗಳ ಹಿಂಡು...!

ನಿತೀಶಕುಮಾರ ಯಾವಾಗಲೂ “ಬಿಹಾರದ ಜನರಿಗಾಗಿ ಯೋಚಿಸಿದ್ದಾರೆ” ಮತ್ತು ಅವರ ನಿರ್ಧಾರವು ಅಂತಿಮವಾಗಿರುತ್ತದೆ ಎಂದು ಜೆಡಿಯು ಸಚಿವ ಜಮಾ ಖಾನ್ ಹೇಳಿದ್ದಾರೆ. ನಮ್ಮ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅವರ ನಡೆಯನ್ನು ಅನುಸರಿಸುತ್ತೇವೆ ಮತ್ತು ಗೌರವಿಸುತ್ತೇವೆ. ಫಲಿತಾಂಶಗಳು ಹೊರಬರಲಿ. ನಿತೀಶಕುಮಾರ ಅವರು ಬಿಹಾರದ ಜನರಿಗಾಗಿ ಯಾವಾಗಲೂ ಯೋಚಿಸುತ್ತಾರೆ ಮತ್ತು ಅವರ ನಿರ್ಧಾರವು ಅಂತಿಮ” ಎಂದು ಖಾನ್ ಹೇಳಿದರು.
“ನಾವು ಎನ್‌ಡಿಎ ಜೊತೆ ದೃಢವಾಗಿ ಇದ್ದೇವೆ. ನಾವು ಕೇಂದ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಜೆಡಿಯುನ ಮತ್ತೊಬ್ಬ ಸಚಿವ ಮದನ ಸಹಾನಿ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement