ದೀದಿ ಹಾಡಿ ಹೊಗಳಿದ ಪಾಕಿಸ್ತಾನದ ಮಾಜಿ ರಾಯಭಾರಿ ಬಸಿತ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು “ಬಂಗಾಳದ ಹುಲಿʼ ಎಂದು ಶ್ಲಾಘಿಸಿದ ಪಾಕಿಸ್ತಾನದ ಮಾಜಿ ರಾಯಭಾರಿ (ಹೈ ಕಮೀಶ್ನರ್‌) ಅಬ್ದುಲ್‌ ಬಸಿತ್‌, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೀದಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
೨೦೧೪ರ ಮಾರ್ಚ್‌ನಿಂದ ೨೦೧೭ ಆಗಸ್ಟ್‌ವರೆಗೆ ಭಾರತಕ್ಕೆ ಪಾಕಿಸ್ತಾನದ ಹೈಕಮೀಶ್ನರ್‌ ಆಗಿದ್ದ ಅಬ್ದುಲ್‌, ೨ ಬಾರಿ ಪಶ್ಚಿಮ ಮಮತಾ ಅವರನ್ನು ಭೇಟಿ ಮಾಡಿದ್ದಾರೆ. ಮಮತಾ ಅವರ ನಮ್ರತೆ, ರಾಜಕೀಯ ತೀಕ್ಷ್ಣತೆ, ಕುಶಾಗ್ರಮತಿ ಗುಣಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಹೊರಳಿದರು.
ಭಾರತೀಯ ಜನತಾ ಪಕ್ಷಕ್ಕೆ ನೈಜ ಸ್ಪರ್ಧೆ ನೀಡಬಲ್ಲ ಏಕೈಕ ರಾಜಕಾರಣಿ ಎಂದರೆ ಮಮತಾ ಬ್ಯಾನರ್ಜಿ ಎಂದು ಬಸಿತ್ ಹೇಳಿದ್ದಾರೆ. ಭಾರತೀಯ ಕಾಂಗ್ರೆಸ್ ಪಕ್ಷವು ತನ್ನ ನೆಲೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದ ಅವರು ಆ ಪಕ್ಷವು ಎಂದಿಗೂ ಚೇತರಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದರು.
ಬಸಿತ್ ಅವರ ವಿವಾದಾತ್ಮಕ ಹೇಳಿಕೆಗಳು ಮತ್ತು ಅವಿವೇಕಗಳಿಗೆ ಹೆಸರುವಾಸಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ಬಸಿತ್ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement