3 ವರ್ಷಗಳಲ್ಲಿ 93 ಸಾವಿರ ಸೈಬರ್ ಅಪರಾಧ ಪ್ರಕರಣ; ಲೋಕಸಭೆಗೆ ಮಾಹಿತಿ ನೀಡಿದ ಸರ್ಕಾರ

ನವದೆಹಲಿ: 2017 ರಿಂದ 2019 ರ ನಡುವೆ ದೇಶದಲ್ಲಿ ಸುಮಾರು 93,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಯಿತು.
ಇದೇ ಅವಧಿಯಲ್ಲಿ ದೇಶದಲ್ಲಿ 46 ಸೈಬರ್ ಭಯೋತ್ಪಾದನೆ ಪ್ರಕರಣಗಳು ವರದಿಯಾಗಿವೆ ಮತ್ತು ಸೈಬರ್ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 66 ಎಫ್ ಅಡಿಯಲ್ಲಿ ಎಫ್ಐಆರ್​ಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದರು.
ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಪ್ರಕಟಿಸಿದ ಮಾಹಿತಿಯ ಪ್ರಕಾರ, 2017, 2018 ಮತ್ತು 2019 ರಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳು ಕ್ರಮವಾಗಿ 21796, 27248 ಮತ್ತು 44546 ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 70 ಬಿ ಯ ನಿಯಮಗಳ ಪ್ರಕಾರ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಸೈಬರ್ ಭದ್ರತಾ ಘಟನೆಗಳಿಗೆ ಪ್ರತಿಕ್ರಿಯಿಸುವ ರಾಷ್ಟ್ರೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಸೈಬರ್ ಅಪರಾಧಗಳು..:
ಕಂಪ್ಯೂಟರ್ ಸಿಸ್ಟಂ ಅಥವಾ ನೆಟ್​ವರ್ಕ್​​ಗಳಿಗೆ ಅನಧಿಕೃತ ಪ್ರವೇಶ/ಹ್ಯಾಕಿಂಗ್, ಡಿಜಿಟಲ್​ ರೂಪದಲ್ಲಿರುವ ಮಾಹಿತಿಯ ಕಳ್ಳತನ, ಈಮೇಲ್ ಬಾಂಬಿಂಗ್, ಸಲಾಮಿ ದಾಳಿ, ಸೇವೆಯ ನಿರಾಕರಣೆ, ವೈರಸ್ ಅಥವಾ ವರ್ಮ್ ದಾಳಿ, ಲಾಜಿಕ್ ಬಂಬ್ ಮತ್ತು ಇಂಟರ್ನೆಟ್ ಸಮಯ ಕಳ್ಳತನ ಹೀಗೆ ಹಲವಾರು ರೀತಿಯಲ್ಲಿ ನಮ್ಮ ಮಾಹಿತಿ ಕದ್ದು ಬಳಸಿಕೊಳ್ಳಲಾಗುತ್ತದೆ.
ಸೈಬರ್ ಅಪರಾಧವನ್ನು ಹೇಗೆ ವರದಿ ಮಾಡುವುದು? ಹೆಸರು, ಈ ಮೇಲೆ ವಿಳಾಸ ಮತ್ತು ಸಂಪರ್ಕಿಸಬೇಕಾದ ವಿವರಗಳೊಂದಿಗೆ ಸೈಬರ್ ಅಪರಾಧ ತನಿಖಾ ಕೋಶದ ಮುಖ್ಯಸ್ಥರಿಗೆ ದೂರು ಸಲ್ಲಿಸಬೇಕಾಗುತ್ತದೆ. ಹಾಗೂ ಯಾವ ರೀತಿಯಲ್ಲಿ ಸೈಬರ್​ ವಂಚನೆಗೆ ಒಳಗಾಗಿದ್ದೇವೆ ಎಂಬುದನ್ನು ಸಹ ಇದೇ ಸಂದರ್ಭದಲ್ಲಿ ವಿವರಗಳ ಸಮೇತ ಸ್ಥಳೀಯ ಪೋಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ಅಲ್ಲದೇ ಈಗ ಸೈಬರ್​ ಅಪರಾಧ ವಿಭಾಗ ಎಂದೇ ತನಿಖಾ ದಳವನ್ನು ಮಾಡಲಾಗಿದೆ.

ಪ್ರಮುಖ ಸುದ್ದಿ :-   ಭಾರತ-ಪಾಕಿಸ್ತಾನ ಪರಮಾಣು ಯುದ್ಧ ನಿಲ್ಲಿಸಲು 'ಸಹಾಯ' ಮಾಡಿದ್ದೇವೆ...ಕದನ ವಿರಾಮಕ್ಕೆ 'ದೊಡ್ಡ ಕಾರಣ' ವ್ಯಾಪಾರ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement