ಕೊಲ್ಲೂರು ದೇವಾಸ್ಥಾನದಲ್ಲಿ ಸಲಾಂ ಮಂಗಳಾರತಿ ಶೀಘ್ರವೇ ನಿಲ್ಲಿಸಬೇಕು: ಕಲ್ಡಡ್ಕ ಪ್ರಭಾಕರ ಭಟ್ ಆಗ್ರಹ

ಉಡುಪಿ: ಆರ್ ಎಸ್ ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪದ್ಧತಿ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ದೇವರನ್ನು ಅವಹೇಳನ ಮಾಡಿರುವ, ಹಿಂದೂ ಸಮಾಜವನ್ನು ನಾಶ ಮಾಡಲು ಪ್ರಯತ್ನಿಸಿದ ಒಬ್ಬ ವ್ಯಕ್ತಿಯ ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದು ಹಿಂದೂ ದೇವತೆಗಳಿಗೆ ಅವಮಾನ ಮಾಡಿದಂತೆ ಎಂದು ಹೇಳಿದರು. ನಮ್ಮ ಅರಿವಿಗೆ ಬಾರದೆ ಇದುವರೆಗೆ ಅದು ನಡೆದುಹೋಗಿದೆ, ಇನ್ನು ಮುಂದೆ ಸಲಾಂ ಮಂಗಳಾರತಿ ನಡೆಯಬಾರದು. ಬೇರೆ ಪೂಜೆ ಬೇಕಿದ್ದರೆ ಆರಂಭಿಸಲಿ ಎಂದರು.

ನಮ್ಮ ದೇವಸ್ಥಾನಗಳಲ್ಲಿ ನಮ್ಮ ಆಚಾರ-ವಿಚಾರಗಳು, ಪದ್ಧತಿ ಮತ್ತು ಸಂಪ್ರದಾಯಗಳು ಜಾರಿಯಲ್ಲಿರಬೇಕು. ಇಷ್ಟು ದಿನ ನಾವು ಉದಾರಿಗಳಾಗಿದ್ದೆವು ಆದರೆ ನಮ್ಮ ಉದಾರ ಮನೋಭಾವನೆಯನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.
ಹಿಂದೂ ದೇವಸ್ಥಾನಗಳ ಸುತ್ತಮುತ್ತ 100 ಮೀಟರ್ ದೂರದವರೆಗೆ ಮುಸಲ್ಮಾನರ ಅಂಗಡಿಗಳು ಇರಬಾರದೆಂದು ಕಾನೂನು ಮಾಡಿದ್ದು 2002ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇದಕ್ಕೆ ಬಿಜೆಪಿ ಸರ್ಕಾರವನ್ನು ದೂಷಿಸುವಂತಿಲ್ಲ. ಮುಸ್ಲಿಂ ವ್ಯಾಪಾರಿಗಳಿಂದ ಅನ್ಯಾಯವಾಗುವುದನ್ನು ಕೃಷ್ಣ ಅವರು ಅರ್ಥಮಾಡಿಕೊಂಡಿದ್ದರು; ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕಮಾರ್ ಅರ್ಥಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.
ಮಸೀದಿಗಳಲ್ಲಿ ಅವರು ಹೂ ಮಾರಿಕೊಳ್ಳಲಿ, ಅಥವಾ ಬೇರೆ ಏನಾದರೂ ಮಾರಿಕೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಅವರು ನಮ್ಮ ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಬೇಡ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement