ಪಂಜಾಬ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಸ್ಫೋಟ-ಭಯೋತ್ಪಾದನೆ ಕೋನ ತಳ್ಳಿಹಾಕಿದ ಪೊಲೀಸ್‌: ಮೂಲಗಳು

ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಗುಪ್ತಚರ ಕಚೇರಿಯ ಮೂರನೇ ಮಹಡಿಯಲ್ಲಿ ಸೋಮವಾರ ರಾತ್ರಿ ಸಣ್ಣ ಸ್ಫೋಟ ಸಂಭವಿಸಿದ್ದು, ಕಿಟಕಿಗಳು ಒಡೆದು ಆಸ್ತಿಗೆ ಹಾನಿಯಾಗಿದೆ.
ರಾಕೆಟ್ ಲಾಂಚರ್ ಬಳಸಿ ಕಟ್ಟಡದ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ಎಸೆಯಲಾಯಿತು ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಪೊಲೀಸ್ ಮೂಲಗಳು ಸ್ಫೋಟವು ಭಯೋತ್ಪಾದಕ ದಾಳಿಯಲ್ಲ ಮತ್ತು ಕಚೇರಿಯಲ್ಲಿ ಇರಿಸಲಾಗಿದ್ದ ಸ್ಫೋಟಕಗಳಿಂದ ಸಂಭವಿಸಿದೆ ಎಂದು ಹೇಳಿದ್ದಾರೆ.
ಕಚೇರಿಯ ಸುತ್ತ ಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ಅಧಿಕೃತ ಹೇಳಿಕೆಯಲ್ಲಿ, ಮೊಹಾಲಿ ಪೊಲೀಸರು, “ಸೆಕ್ಟರ್ 77, ಎಸ್‌ಎಎಸ್ ನಗರದಲ್ಲಿರುವ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಪ್ರಧಾನ ಕಚೇರಿಯಲ್ಲಿ ರಾತ್ರಿ 7:45 ರ ಸುಮಾರಿಗೆ ಸಣ್ಣ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ಫೋರೆನ್ಸಿಕ್ ತಂಡಗಳುನ್ನು ಕರೆಸಲಾಗಿದೆ ಎಂದು ತಿಳಿಸಲಾಗಿದೆ.

ಘಟನೆಯ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪೊಲೀಸರಿಂದ ವಿವರವಾದ ವರದಿ ಕೇಳಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿ, “ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯಲ್ಲಿ ನಡೆದ ಸ್ಫೋಟದ ಬಗ್ಗೆ ಕೇಳಿ ಆಘಾತವಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ನಮ್ಮ ಪೊಲೀಸ್ ಪಡೆಗಳ ಮೇಲಿನ ಈ ಲಜ್ಜೆಗೆಟ್ಟ ದಾಳಿ ತೀವ್ರ ಕಳವಳಕಾರಿಯಾಗಿದೆ ಮತ್ತು ದುಷ್ಕರ್ಮಿಗಳನ್ನು ಬಂಧಿಸುವಂತೆ ಸಿಎಂ ಭಗವಂತ್ ಮಾನ್ ಅವರನ್ನು ಒತ್ತಾಯಿಸುತ್ತೇನೆ. ಆದಷ್ಟು ಬೇಗ ನ್ಯಾಯ ಕೊಡಿಸಿ ಎಂದು ಬರೆದಿದ್ದಾರೆ.
ಪಂಜಾಬ್ ಪೊಲೀಸರು ಸಂಭವನೀಯ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಿದ ಮತ್ತು ರಾಜ್ಯದ ತರನ್‌ ತರನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಬ್ಬರನ್ನು ಬಂಧಿಸಿದ ಒಂದು ದಿನದ ನಂತರ ಸ್ಫೋಟ ಸಂಭವಿಸಿದೆ.

ಪ್ರಮುಖ ಸುದ್ದಿ :-   ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

RPG ಎಂದರೇನು?
ರಾಕೆಟ್-ಚಾಲಿತ ಗ್ರೆನೇಡ್ ಭುಜದ ಮೇಲಿನಿಂದ ಉಡಾಯಿಸುವ ಕ್ಷಿಪಣಿಯಾಗಿದ್ದು ಅದು ಸ್ಫೋಟಕ ಸಿಡಿತಲೆ ಹೊಂದಿರುವ ರಾಕೆಟ್‌ಗಳನ್ನು ಉಡಾಯಿಸುತ್ತದೆ. ಹೆಚ್ಚಿನ RPG ಗಳನ್ನು ಒಬ್ಬ ವ್ಯಕ್ತಿಯು ಒಯ್ಯಬಹುದು ಮತ್ತು ಆಗಾಗ್ಗೆ ಟ್ಯಾಂಕ್ ವಿರೋಧಿ ಆಯುಧವಾಗಿ ಬಳಸಲಾಗುತ್ತದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement