ಹಿಜಾಬ್ ಮುಟ್ಟಲು ಯತ್ನಿಸುವವರ ಕೈ ಕತ್ತರಿಸ್ತೇವೆ ಎಂದು ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಂ ವಿವಾದಿತ ಹೇಳಿಕೆ

ದೇಶಾದತ ತರಗತಿಗಳಲ್ಲಿ ಹಿಜಾಬ್‌ ನಿಷೇಧದ ವಿವಾದ ಚರ್ಚೆ ನಡೆಯುತ್ತಿರುವಂತೆಯೇ ಮಧ್ಯೆಯೇ ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಮ್ ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಶನಿವಾರ ಹಿಜಾಬ್ ಅನ್ನು ಮುಟ್ಟಲು ಪ್ರಯತ್ನಿಸುವವರ ಕೈಗಳನ್ನು ಕತ್ತರಿಸಲಾಗುವುದು ಎಂದು ಹೇಳಿದ್ದಾರೆ.
ಶುಕ್ರವಾರ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳು ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಹೇಳಿಕೆಯಿಂದ ವಿವಾದಕ್ಕೆ ಕಾರಣವಾಗಿರುವ ರುಬಿನಾ ಖಾನಂ, “ನೀವು ಭಾರತದ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಗೌರವದೊಂದಿಗೆ ಆಟವಾಡಲು ಪ್ರಯತ್ನಿಸಿದರೆ, ಅವರು ಝಾನ್ಸಿ ಕಿ ರಾಣಿ ಮತ್ತು ರಜಿಯಾ ಸುಲ್ತಾನಾ ಅವರಂತೆ ಹಿಜಾಬ್‌ ಮುಟ್ಟಿದವರ ಕೈಗಳನ್ನು ಕತ್ತರಿಸಲು ಸಮಯ ದೂರವಿಲ್ಲ ಎಂದು ಹೇಳಿದ್ದಾರೆ.
ಭಾರತವು ವೈವಿಧ್ಯತೆಯ ದೇಶವಾಗಿದೆ ಮತ್ತು ಒಬ್ಬ ವ್ಯಕ್ತಿಯು ಹಣೆಯ ಮೇಲೆ ತಿಲಕವನ್ನು ಹೊಂದಿದ್ದಾನೆಯೇ ಅಥವಾ ಪೇಟ ಅಥವಾ ಹಿಜಾಬ್ ಧರಿಸಿದ್ದಾನೆಯೇ ಎಂಬುದು ಮುಖ್ಯವಲ್ಲ. ಘುಂಘಟ್’ ಮತ್ತು ಹಿಜಾಬ್ “ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗಗಳು” ಎಂದು ಅವರು ಹೇಳಿದರು. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಮೂಲಕ ವಿವಾದ ಸೃಷ್ಟಿಸುವುದು ಭಯಾನಕವಾಗಿದೆ ಎಂದು ಎಂದು ಸಮಾಜವಾದಿ ಪಕ್ಷದ ನಾಯಕಿ ಹೇಳಿದ್ದಾರೆ.
ಯಾವುದೇ ಪಕ್ಷದಿಂದ ಸರ್ಕಾರ ನಡೆಸಬಹುದು, ಆದರೆ ಮಹಿಳೆಯರನ್ನು ದುರ್ಬಲ ಎಂದು ಪರಿಗಣಿಸುವ ತಪ್ಪನ್ನು ಯಾರೂ ಮಾಡಬಾರದು ಎಂದು ರುಬಿನಾ ಖಾನಂ ಹೇಳಿದ್ದಾರೆ.
ಮಾರ್ಚ್ 7 ರಂದು ಮುಕ್ತಾಯಗೊಳ್ಳಲಿರುವ ಏಳು ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಡುವೆ ಸಮಾಜವಾದಿ ಪಕ್ಷದ ನಾಯಕಿಯಿಂದ ಈ ಹೇಳಿಕೆಗಳು ಬಂದಿವೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement