ತಮ್ಮ ಮೊದಲ ಟೆಸ್ಟ್‌ ಪಂದ್ಯದಲ್ಲೇ ವೆಸ್ಟ್‌ ಇಂಡೀಸ್‌ ವಿರುದ್ಧ ಶತಕ ಸಿಡಿಸಿದ ಭಾರತದ ಯಶಸ್ವಿ ಜೈಸ್ವಾಲ್: ಈ ಸಾಧನೆ ಮಾಡಿದ 17ನೇ ಭಾರತೀಯ

ನವದೆಹಲಿ: ಗುರುವಾರ (ಜುಲೈ 13), ಭಾರತದ ಆರಂಭಿಕ ಬ್ಯಾಟರ್‌ ಆಗಿ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ ಅವರು ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 17ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್‌ ಇಂಡೀಸ್‌ನ ಅಲ್ಪ 150 ರನ್‌ಗಳಿಗೆ ಉತ್ತರವಾಗಿ ಭಾರತ ಡೊಮಿನಿಕಾದಲ್ಲಿ ನಡೆಯುತ್ತಿರುವ ಡೆಸ್ಟ್‌ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿತ್ತು. ಗುರುವಾರ ಮೊದಲ ಟೆಸ್ಟ್‌ನ ಮೊದಲ ಟೆಸ್ಟ್‌ನ 2 ನೇ ದಿನದ ಆಟದಲ್ಲಿ ಜೈಸ್ವಾಲ್ ತಮ್ಮ ಆಟ ಮುಂದುವರಿಸಿ ನಾಯಕ ರೋಹಿತ್‌ ಶರ್ಮಾ ಅವರ ಬೃಹತ್‌ ಮೊತ್ತದ ಆರಂಭಿಕ ಪಾಲುದಾರಿಕೆಯಲ್ಲಿ ಈ ಅಪರೂಪದ ಸಾಧನೆಯನ್ನು ಮಾಡಿದರು. ಅವರು ೧೧೪ ರನ್‌ಗಳಿಸಿ ಆಡುತ್ತಿದ್ದಾರೆ.
ತನ್ನ ಮೊದಲ ಟೆಸ್ಟ್‌ನಲ್ಲಿ ಮೂರು ಅಂಕಿಗಳ ಅಂಕವನ್ನು ತಲುಪಿದ ಜೈಸ್ವಾಲ್ ಈಗ 17 ನೇ ಭಾರತೀಯರಾಗಿದ್ದಾರೆ ಹಾಗೂ ಒಟ್ಟಾರೆಯಾಗಿ 113ನೇ ಆಟಗಾರರಾಗಿದ್ದಾರೆ. ಭಾರತೀಯರಲ್ಲಿ, ಲಾಲಾ ಅಮರನಾಥ, ಜಿ.ಆರ್. ವಿಶ್ವನಾಥ, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಸುರೇಶ ರೈನಾ, ವೀರೇಂದ್ರ ಸೆಹ್ವಾಗ್, ಮುಂತಾದ ಹಲವಾರು ದೊಡ್ಡ ಹೆಸರುಗಳನ್ನು ಪಟ್ಟಿ ಒಳಗೊಂಡಿದೆ. ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಕೊನೆಯ ಭಾರತೀಯ ಶ್ರೇಯಸ್ ಅಯ್ಯರ್ ಅವರು ಈ ಸಾಧನೆ ಮಾಡಿದ್ದರು.
ಭಾರತದ ಪರ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರರು
18 ವರ್ಷ 329 ದಿನಗಳು ಪೃಥ್ವಿ ಶಾ- ವೆಸ್ಟ್‌ ಇಂಡೀಸ್‌ ವಿರುದ್ಧ-ರಾಜ್‌ಕೋಟ್- 2018
20 ವರ್ಷ 126 ದಿನಗಳು – ಅಬ್ಬಾಸ್ ಅಲಿ ಬೇಗ್- ಇಂಗ್ಲೆಂಡ್‌ ವಿರುದ್ದ-ಓಲ್ಡ್ ಟ್ರಾಫರ್ಡ್-1959
20 ವರ್ಷ 276 ದಿನಗಳು – ಗುಂಡಪ್ಪ ವಿಶ್ವನಾಥ- ಆಸ್ಟ್ರೇಲಿಯಾ ವಿರುದ್ಧ, ಕಾನ್ಪುರ- 1969
21 ವರ್ಷ 196 ದಿನಗಳು – ಯಶಸ್ವಿ ಜೈಸ್ವಾಲ್ -ವೆಸ್ಟ್‌ ಇಂಡೀಸ್‌ ವಿರುದ್ಧ -ರೋಸೋ- 2023
21 ವರ್ಷ 327 ದಿನಗಳು – ಮೊಹಮ್ಮದ್ ಅಜರುದ್ದೀನ್ -ಇಂಗ್ಲೆಂಡ್‌ ವಿರುದ್ಧ-ಕೋಲ್ಕತ್ತಾ-1984

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement