ದೆಹಲಿ ಪೊಲೀಸರ ಎಚ್ಚರಿಕೆ ಫಲಕದಿಂದ ಪ್ರತಿಭಟನಾನಿರತರಿಗೆ ಅಸಮಾಧಾನ

ದೆಹಲಿ: ರೈತರು ಒಂದೆಡೆ ಸೇರಿರುವುದು ಕಾನೂನು ಬಾಹಿರ ಎಂದು ದೆಹಲಿ ಪೊಲೀಸರು ಟಕ್ರಿ ಗಡಿಯಲ್ಲಿ ಫಲಕ ಹಾಕಿರುವುದು ಹೋರಾಟ ನಿರತ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
“ಒಂದೆಡೆ ಸೇರಿ ಸಭೆ ನಡೆಸುವುದು ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ. ಇಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಲಾಗುವುದು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಹಿಂದಿ ಹಾಗೂ ಪಂಜಾಬಿ ಭಾಷೆಯಲ್ಲಿ ಬರೆದ ಫಲಕ ಇಡಲಾಗಿದೆ.
ಜನವರಿ ೨೬ರ ಘಟನೆ ನಂತರ ಫಲಕಗಳನ್ನು ಇಡಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಸುಧಾಂಶು ಧಮಾ ತಿಳಿಸಿದ್ದಾರೆ. ನಾವು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗಡಿಯ ಸಮೀಪ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಪ್ರತಿಭಟನಾ ತಾಣಗಳಲ್ಲಿ ಬೋರ್ಡ್‌ಗಳನ್ನು ಹಾಕಿದ್ದೇವೆ. ಒಂದು ವೇಳೆ ರೈತರು ಮತ್ತೆ ಕಾನೂನನ್ನು ಉಲ್ಲಂಘಿಸಿದರೆ, ಅದು ಕಾನೂನುಬಾಹಿರ ಎಂದು ಅವರು ತಿಳಿದುಕೊಳ್ಳಬೇಕು ಎಂದರು.
ನಾವು ಪೊಲೀಸರ ಬೆದರಿಗೆ ಬಗ್ಗುವುದಿಲ್ಲ. ನಮ್ಮ ಸಂಘಟನೆ ಬಲವಾಗಿದೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ಇಲ್ಲಿಂದ ತೆರಳುವುದಿಲ್ಲ ಎಂದು ರೈತ ಮುಖಂಡ ಶಿಂಗರಾಸಿಂಗ್‌ ಮಾನ್‌ ತಿಳಿಸಿದ್ದಾರೆ.
ನಾವು ಪೊಲೀಸರ ಕ್ರಮವನ್ನು ಖಂಡಿಸುತ್ತೇವೆ. ಕಳೆದ ೯೦ ದಿನಗಳಿಂದ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಡಾ. ದಶನ್‌ ಪಾಲ್‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಜಯಪುರ : 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ 58 ಮಂದಿ ಸಾವಿಗೀಡಾಗಿದ್ದ ಕೊಯಮತ್ತೂರು ಸ್ಫೋಟದ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement